Select Location
All Locations
State
Region
City / District
MGR ಮಡಿಲಲ್ಲಿ ಬೆಳೆದ ನಾನು ಎಂದೂ ರಾಜಕೀಯ ಲಾಭ ಪಡೆಯಲಿಲ್ಲ: ಕಮಲ್ ಹಾಸನ್

MGR ಮಡಿಲಲ್ಲಿ ಬೆಳೆದ ನಾನು ಎಂದೂ ರಾಜಕೀಯ ಲಾಭ ಪಡೆಯಲಿಲ್ಲ: ಕಮಲ್ ಹಾಸನ್

ತಿರುಚಿರಾಪಳ್ಳಿ: ನಾನು ಬಾಲ್ಯದಲ್ಲಿ ನಟ–ರಾಜಕಾರಣಿ ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಅವರ ಮಡಿಲಲ್ಲಿ ಬೆಳೆದವನು. ಆದರೆ ಎಂದಿಗೂ ನಾನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ನಟ ಹಾಗೂ ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಪರೋಕ್ಷವಾಗಿ ಟಿವಿಕೆ ಮುಖ್ಯಸ್ಥ ವಿಜಯ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೂರ್ವ ತಿರುಚಿರಾಪಳ್ಳಿ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಇನಿಗೋ ಎಸ್.ಇರುದಯರಾಜ್ ಪರವಾಗಿ ಪ್ರಚಾರ ನಡೆಸುವ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ.

'ನಾನು ಕೂಡ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದವನು. ಎಂಜಿಆರ್ ಅವರಿಗೆ ನಾನು ಎಂದರೆ ಬಹಳ ಪ್ರೀತಿ ಇತ್ತು. ಆದರೂ ನಾನು ಆ ನಿಕಟತೆಯನ್ನು ಎಲ್ಲೂ ಪ್ರದರ್ಶಿಸಿಕೊಳ್ಳಲಿಲ್ಲ ಅಥವಾ ದುರುಪಯೋಗಪಡಿಸಿಕೊಳ್ಳಲಿಲ್ಲ' ಎಂದು ಕಮಲ್ ಹೇಳಿದ್ದಾರೆ. ಇತ್ತೀಚೆಗೆ ನಟ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿ ತಮ್ಮನ್ನು ಎಂಜಿಆರ್ ಅವರ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಕಮಲ್ ಹಾಸನ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.


Prajavani 11 days ago
Home Flash News