BMTC ಹಾಗೂ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ!
ಬೆಂಗಳೂರು (ಏ.27): ನಗರ ಸಾರಿಗೆ ವ್ಯವಸ್ಥೆ ಜನರ ಜೀವನಾಡಿಯಾಗಿದೆ. ತಮ್ಮ ತಮ್ಮ ಕೆಲಸಕ್ಕೆ ತೆರಳಲು ನಿತ್ಯ ಲಕ್ಷಾಂತರ ಪ್ರಯಾಣಿಕರು (Passengers) ಮೆಟ್ರೋ ಹಾಗೂ ಬಿಎಂಟಿಸಿ ಬಸ್ಗಳ ಮೂಲಕ ಪ್ರಯಾಣ ಮಾಡ್ತಾರೆ. ಸಾರಿಗೆ ವ್ಯವಸ್ಥೆ ಒಂದು ದಿನ ಬಂದ್ ಆದ್ರೂ ಸಾಮಾನ್ಯ ಜನರಿಗೆ ಕಷ್ಟ ಕಷ್ಟವೇ ಆಗುತ್ತೆ. ಇನ್ನೂ ನಮ್ಮ ಮೆಟ್ರೋ (Namma Metro) ಬಂದ ಬಳಿಕ ಮೆಟ್ರೋ ಹಾಗೂ ಬಿಎಂಟಿಸಿ ಎರಡನ್ನೂ ಬಳಸುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಸೌಲಭ್ಯ ಜಾರಿಗೆ ತರಲು ಸಾರಿಗೆ ಇಲಾಖೆ (Transport Department) ಮುಂದಾಗಿದೆ. ಏನದು?
ಶೀಘ್ರದಲ್ಲೇ ಮಹತ್ವದ ಬದಲಾವಣೆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ತರಲು ಇಲಾಖೆ ಮುಂದಾಗಿದೆ. ನಗರದಲ್ಲಿ ನಿತ್ಯ ಜನರು ಮೆಟ್ರೋಗಳ ಸಂಪರ್ಕ ಇರುವ ಕಡೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ ಬಳಿಕ ಬಿಎಂಟಿಸಿ ಬಸ್ ಮೂಲಕ ತಾವು ತಲುಪಬೇಕಿದ್ದ ಸ್ಥಳಕ್ಕೆ ಹೋಗ್ತಾರೆ. ಹೀಗೆ ಎರಡೂ ಸಾರಿಗೆಗಳನ್ನ ಬಳಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಒಂದೇ ಸ್ಮಾರ್ಟ್ ಕಾರ್ಡ್ ಜಾರಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಒಂದೇ ಸ್ಮಾರ್ಟ್ ಕಾರ್ಡ್ ಜಾರಿಗೆ ಬಿಎಂಟಿಸಿ ಮತ್ತು ಮೆಟ್ರೋ ಎರಡಕ್ಕೂ ಒಂದೇ ಸ್ಮಾರ್ಟ್ ಕಾರ್ಡ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಬಿಎಂಟಿಸಿ, ಮೆಟ್ರೋದಲ್ಲಿ ಪ್ರಯಾಣಿಸುವವರು ಎರಡೆರಡು ಕಾರ್ಡ್ ಬಳಸಬೇಕಿಲ್ಲ. ಎರಡಕ್ಕೂ ಒಂದೇ 'ಸ್ಮಾರ್ಟ್ ಕಾರ್ಡ್' ಬಳಸುವಂತಹ ಸೌಲಭ್ಯ ಶೀಘ್ರವೇ ಜಾರಿಗೆ ಬರಲಿದೆ.
ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲ ಪ್ರಯಾಣಿಕರು ಒಂದೇ ಸ್ಮಾರ್ಟ್ ಕಾರ್ಡ್ ರೀ-ಚಾರ್ಜ್ ಮಾಡಿಕೊಂಡ್ರೆ ಸಾಕು, ಅದನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೈಪ್ ಮಾಡಿ ಪ್ರಯಾಣಿಸಬಹುದು. ಈ ನೂತನ ವ್ಯವಸ್ಥೆಯಿಂದ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅತ್ಯಾಧುನಿಕ ಟಿಕೆಟ್ ಮಿಷನ್ ಬಿಎಂಟಿಸಿ ಈಗಾಗಲೇ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲು ಸನ್ನದ್ಧವಾಗಿದ್ದು, ತ್ವರಿತವಾಗಿ ಎಲ್ಲಾ ಡಿಪೋಗಳಿಗೆ ಅತ್ಯಾಧುನಿಕ ಟಿಕೆಟ್ ಮಿಷನ್‌ಗಳನ್ನು ವಿತರಣೆ ಮಾಡಲಾಗ್ತಿದೆ. ಈ ಮಿಷನ್‌ಗಳ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಸುಲಭವಾಗಿ ರೀಡ್ ಮಾಡಬಹುದು. ಹೊಸ ಕಾರ್ಡ್ ಪಡೆಯಲು ಮತ್ತು ರೀಚಾರ್ಜ್ ಮಾಡಲು ಪ್ರಯಾಣಿಕರಿಗೆ ಅನುಕೂಲಕರ ಕೇಂದ್ರಗಳ ಸ್ಥಾಪನೆ ಮಾಡಲು ಸಾರಿಗೆ ಸಂಸ್ಥೆ ಮುಂದಾಗಿದೆ.