Select Location
All Locations
State
Region
City / District
ಸಂಧಾನಕ್ಕೆ ಬೇಕಾದ ‌ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಇಲ್ಲ: ಇರಾನ್‌

ಸಂಧಾನಕ್ಕೆ ಬೇಕಾದ ‌ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಇಲ್ಲ: ಇರಾನ್‌

ಟೆಹರಾನ್‌: ‘ಪಾಕಿಸ್ತಾನವು ನಮ್ಮ ಉತ್ತಮ ಸ್ನೇಹಿತ. ಆದರೆ, ಸಂಧಾನಕಾರರಿಗೆ ಇರಬೇಕಾದ ವಿಶ್ವಾಸಾರ್ಹತೆ ಅದಕ್ಕೆ ಇಲ್ಲ’ ಎಂದು ಇರಾನ್‌ ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಜಾಯಿ ತಿಳಿಸಿದ್ದಾರೆ. ಅಮೆರಿಕ ಮತ್ತು ಇರಾನ್‌ ನಡುವೆ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಶಾಂತಿ ಮಾತುಕತೆಗೆ ಪಾಕಿಸ್ತಾನ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ. ‘ಪಾಕಿಸ್ತಾನವು ನಮ್ಮ ಉತ್ತಮ ಸ್ನೇಹಿತ ಮತ್ತು ನೆರೆಯ ರಾಷ್ಟ್ರವಾಗಿದೆ. ಆದರೆ, ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಅದು ಸೂಕ್ತ ದೇಶವಲ್ಲ. ಸಂಧಾನಕ್ಕೆ ಅಗತ್ಯವಾದ ವಿಶ್ವಾಸಾರ್ಹತೆಯನ್ನೂ ಹೊಂದಿಲ್ಲ.

ಟ್ರಂಪ್‌ ಹಿತಾಸಕ್ತಿಯನ್ನು ಪರಿಗಣಿಸುವ ಅವರು, ಅಮೆರಿಕದ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ’ ಎಂದಿದ್ದಾರೆ. ಈ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಒಮಾನ್‌ನಿಂದ ಹಿಂದಿರುಗುವಾಗ ಭಾನುವಾರ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಇದು ಮೂರು ದಿನಗಳಲ್ಲಿ ಅವರ ಎರಡನೇ ಭೇಟಿಯಾಗಿದೆ. ಇದಕ್ಕೂ ಮೊದಲು, ಅರಾಘ್ಚಿ ಅವರು ಪಾಕಿಸ್ತಾನಕ್ಕೆ ಆಗಮಿಸಿ ಉನ್ನತ ನಾಯಕರನ್ನು ಭೇಟಿ ಮಾಡಿದ್ದರು. ಆದರೆ, ಅಮೆರಿಕದ ನಿಯೋಗ ಬರುವ ಮೊದಲೇ ಇರಾನ್ ನಿಯೋಗವು ಇಸ್ಲಾಮಾಬಾದ್‌ನಿಂದ ನಿರ್ಗಮಿಸಿತ್ತು. ಇದರಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿನಿಧಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಲ್ಲ.


Prajavani 1 hour ago
Home Flash News