RCB ಬಿಗಿ ದಾಳಿಗೆ ನಲುಗಿದ ಡೆಲ್ಲಿ: 8ಕ್ಕೆ 6...75 ಕ್ಕೆ ಆಲೌಟ್!
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗಿ ದಾಳಿಗೆ ನಲುಗಿದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 75 ರನ್ ಗಳಿಗೆ ಆಲೌಟಾಗಿದೆ. ಪವರ್‌ಪ್ಲೇ ಕೊನೆಯಲ್ಲಿ 13 ರನ್ ಮಾತ್ರ ಗಳಿಸಿತು. ಇದು ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ಬರಿ ಕನಿಷ್ಠ ಸ್ಕೋರ್ ದಾಖಲಿಸಿತು. ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭುವನೇಶ್ವರ್ ಕುಮಾರ್, ಹ್ಯಾಜಲ್‌ವುಡ್ ಅವರ ದಾಳಿಗೆ ನಲುಗಿದ ಡೆಲ್ಲಿ ಪೆವಿಲಿಯನ್ ಪರೇಡ್ ನಡೆಸಿತು. 8 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಕೆಟ್ಟ ದಾಖಲೆ ಬರೆಯುವ ಸ್ಥಿತಿಗೆ ತಲುಪಿತು.
ಆ ಬಳಿಕ ಡೇವಿಡ್ ಮಿಲ್ಲರ್ 19, ಅಭಿಷೇಕ್ ಪೊರೆಲ್ 30 ರನ್, ಕೈಲ್ ಜೇಮಿಸನ್ 12 ರನ್ ಕೊಡುಗೆ ನೀಡಿ ಆರ್ ಸಿಬಿ ಹೆಸರಿನಲ್ಲಿರುವ ಕನಿಷ್ಟ ಸ್ಕೋರ್ ದಾಖಲೆಯಿಂದ ಪಾರು ಮಾಡಿದರು. ಸಾಹಿಲ್ ಪರಾಖ್, ಕೆಎಲ್ ರಾಹುಲ್, ಸಮೀರ್ ರಿಜ್ವಿ, ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್ ಮತ್ತು ನಿತೀಶ್ ರಾಣಾ ಒಬ್ಬರಾದ ಮೇಲೆ ಒಬ್ಬರು ಬಂದು ಹೋದರು. 16.3 ಓವರ್ ಗಳಲ್ಲಿ 75ಕ್ಕೆ ಸರ್ವಪತನ ಕಂಡಿತು. ಬಿಗಿ ದಾಳಿ ನಡೆಸಿದ ಹ್ಯಾಜಲ್ ವುಡ್ 4, ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರು. ರಸಿಕ್ ಸಲಾಂ ದಾರ್, ಸುಯಶ್ ಶರ್ಮ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. '49' ಆರ್ ಸಿಬಿ ರೆಕಾರ್ಡ್ ಸೇಫ್ ಎಂದು ಟ್ರೋಲ್ ! ಸದ್ಯ ಆರ್ ಸಿಬಿ ರೆಕಾರ್ಡ್ ಸೇಫ್ ಎಂದು ಎಕ್ಸ್ ನಲ್ಲಿ ಟ್ರೆಂಡಿಂಗ್ ಮಾಡಲಾಗುತ್ತಿದೆ.
2017 ರಲ್ಲಿ ಆರ್ ಸಿಬಿ ಕೆಕೆಆರ್ ವಿರುದ್ಧ ಗಳಿಸಿದ್ದ 49 ರನ್ ಐಪಿಎಲ್ ಇತಿಹಾಸದ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ. 2009 ರಲ್ಲಿ ರಾಜಸ್ಥಾನ್ ರಾಯಲ್ಸ್ ಆರ್ ಸಿಬಿ ಎದುರು 58 ರನ್ ಗೆ ಆಲೌಟಾಗಿತ್ತು.2023 ರಲ್ಲಿ ಮತ್ತೊಮ್ಮೆ ರಾಜಸ್ಥಾನ್ ರಾಯಲ್ಸ್ 59 ರನ್ ಗಳಿಗೆ ಆಲೌಟಾಗಿತ್ತು. ಅಮೋಘ ಜಯ ಗುರಿ ಬೆನ್ನಟ್ಟಿದ ಆರ್ ಸಿಬಿ ಸುಲಭ ಜಯ ತನ್ನದಾಗಿಸಿಕೊಂಡಿತು.6.3 ಓವರ್ ಗಳಲ್ಲಿ 77 ರನ್ ಗಳಿಸಿತು. 9 ವಿಕೆಟ್ ಗಳಿಂದ ಜಯ ಸಾಧಿಸುವ ಮೂಲಕ ಪಂದ್ಯದಿಂದ ಉತ್ತಮ ರನ್ ರೆಟ್ ಲಭ್ಯವಾಯಿತು. ಜಾಕೋಬ್ ಬೆಥೆಲ್ 20 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 23, ದೇವದತ್ ಪಡಿಕ್ಕಲ್ 34 ರನ್ ಗಳಿಸಿ ಔಟಾಗದೆ ಉಳಿದರು. ಐಪಿಎಲ್ ನಲ್ಲಿ ಕೊಹ್ಲಿ 9 ಸಾವಿರ ರನ್ ಕಲೆ ಹಾಕಿದ ದಾಖಲೆ ಬರೆದರು.