2026ರ ಹಣಕಾಸು ವರ್ಷದಲ್ಲಿ ಜಿಯೋಹಾಟ್‌ಸ್ಟಾರ್ ₹31,048 ಕೋಟಿ ರೆಕಾರ್ಡ್ ಆದಾಯ, ದಾಖಲೆಯ ₹3,210 ಕೋಟಿ ಲಾಭ!
FY26ರಲ್ಲಿ ಜಿಯೋಹಾಟ್‌ಸ್ಟಾರ್ ₹31,048 ಕೋಟಿ ಆದಾಯ ಮುಖೇಶ್ ಅಂಬಾನಿ ನೇತೃತ್ವದ ಜಿಯೋಹಾಟ್‌ಸ್ಟಾರ್ (ಜಿಯೋಸ್ಟಾರ್) 2026ರ ಹಣಕಾಸು ವರ್ಷದಲ್ಲಿ ದಾಖಲೆಯ ಮಟ್ಟದ ಸಾಧನೆ ಮಾಡಿದ್ದು, ಬೃಹತ್ ವೀಕ್ಷಕರ ಸಂಖ್ಯೆಯೊಂದಿಗೆ ತನ್ನ ಮಾರುಕಟ್ಟೆ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಹಾಗೂ ಐಪಿಎಲ್ ಮುಂತಾದ ಪ್ರಮುಖ ಕ್ರೀಡಾ ಕಾರ್ಯಕ್ರಮಗಳ ಪರಿಣಾಮವಾಗಿ ವೇದಿಕೆಯ ಬಳಕೆದಾರರ ತೊಡಗಿಸಿಕೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗಿದೆ. ದಾಖಲೆಯ ಆದಾಯ ಮತ್ತು ಲಾಭ FY26ರಲ್ಲಿ ಜಿಯೋಹಾಟ್‌ಸ್ಟಾರ್ ₹31,048 ಕೋಟಿ ಆದಾಯವನ್ನು ಗಳಿಸಿದ್ದು, ಒಟ್ಟು ಆದಾಯ ₹36,248 ಕೋಟಿಗಳಷ್ಟಾಗಿದೆ.
ತೆರಿಗೆ ನಂತರದ ಲಾಭ (PAT) ₹3,210 ಕೋಟಿ ದಾಖಲಾಗಿದ್ದು, EBITDA ₹4,885 ಕೋಟಿಗಳಾಗಿದೆ. ಈ ಮೂಲಕ ಸುಮಾರು 15.7% ಲಾಭಾಂಶವನ್ನು ಕಾಯ್ದುಕೊಂಡಿದೆ. ತೆರಿಗೆಗೆ ಮುಂಚಿನ ಲಾಭ (PBT) ₹3,228 ಕೋಟಿಗಳಷ್ಟಾಗಿದೆ. ವೇದಿಕೆಯ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ (MAUs) FY26ರ ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು 500 ಮಿಲಿಯನ್ ತಲುಪಿದ್ದು, ಮಾರ್ಚ್ 2026ರ ವೇಳೆಗೆ ಇದು ಸುಮಾರು 550 ಮಿಲಿಯನ್‌ಗೆ ಏರಿಕೆಯಾಗಿದೆ. ಇದರಿಂದ ಜಿಯೋಹಾಟ್‌ಸ್ಟಾರ್ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಐಸಿಸಿ ಟಿ20 ವಿಶ್ವಕಪ್ ಫೈನಲ್ ವೇಳೆ ಗರಿಷ್ಠ ಏಕಕಾಲಿಕ ವೀಕ್ಷಕರ ಸಂಖ್ಯೆ 72.5 ಮಿಲಿಯನ್ ದಾಖಲಾಗಿರುವುದು ವಿಶೇಷ.