Select Location
All Locations
State
Region
City / District
Viral Video: ಲ್ಯಾಂಡ್‌ ಆಗುವ ವೇಳೆ ಟ್ರಕ್‌ಗೆ ಡಿಕ್ಕಿ ಹೊಡೆದ ಬೋಯಿಂಗ್ 767 ವಿಮಾನ!

Viral Video: ಲ್ಯಾಂಡ್‌ ಆಗುವ ವೇಳೆ ಟ್ರಕ್‌ಗೆ ಡಿಕ್ಕಿ ಹೊಡೆದ ಬೋಯಿಂಗ್ 767 ವಿಮಾನ!

ನ್ಯೂಜೆರ್ಸಿ: ಅಮೆರಿಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ 'ನ್ಯೂಜೆರ್ಸಿ ಟರ್ನ್‌ಪೈಕ್'ನಲ್ಲಿ ಸಂಭವಿಸಿದ ವಿಲಕ್ಷಣ ಅಪಘಾತವೊಂದು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಲ್ಯಾಂಡ್‌ ಆಗುವ ವೇಳೆ ಹೆದ್ದಾರಿಗಳಲ್ಲಿ ಬೇಕರಿ ತಿನಿಸು ಹೊತ್ತೊಯ್ಯುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಸಾವಿನ ದವಡೆಯಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಘಟನೆಯ ವಿವರ ಕಳೆದ ಏಳು ವರ್ಷಗಳಿಂದ ಇದೇ ಹಾದಿಯಲ್ಲಿ ಬೇಕರಿ ಉತ್ಪನ್ನಗಳ ಲಾರಿ ಚಾಲನೆ ಮಾಡುತ್ತಿದ್ದ ವಾರೆನ್ ಬೋರ್ಡ್ಲಿ ಜೂನಿಯರ್, ಎಂದಿನಂತೆ ತನ್ನ ಕೆಲಸದಲ್ಲಿದ್ದರು.

ಈ ವೇಳೆ ನ್ಯೂಯಾರ್ಕ್‌ನ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಅತಿ ಕೆಳಮಟ್ಟದಲ್ಲಿ ಹಾರುತ್ತಿದ್ದ ಯುನೈಟೆಡ್ ಏರ್ಲೈನ್ಸ್‌ನ ಬೋಯಿಂಗ್ 767 ವಿಮಾನವು ನಿಯಂತ್ರಣ ತಪ್ಪಿ ಟ್ರಕ್‌ ನ ಮೇಲ್ಭಾಗಕ್ಕೆ ಡಿಕ್ಕಿ ಹೊಡೆದಿದೆ. ಭೀಕರತೆಯ ದೃಶ್ಯ ವಿಮಾನದ ಲ್ಯಾಂಡಿಂಗ್ ಗೇರ್‌ನ ದೈತ್ಯ ಚಕ್ರವೊಂದು ಟ್ರಕ್‌ ನ ಮುಂಭಾಗದ ವಿಂಡ್‌ಶೀಲ್ಡ್ ಮತ್ತು ಕಿಟಕಿಯನ್ನು ಸೀಳಿ ಹಾಕಿದೆ. ಗಾಜಿನ ಚೂರುಗಳು ಮೈಮೇಲೆ ಬಿದ್ದ ಪರಿಣಾಮ ಚಾಲಕನ ಕೈ ಮತ್ತು ತೋಳುಗಳಿಗೆ ತೀವ್ರ ಗಾಯಗಳಾಗಿವೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.


Udayavani 53 minutes ago
Home Flash News