Select Location
All Locations
State
Region
City / District
ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್: ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!

ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್: ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!

ಚೆನ್ನೈ (ಮೇ.9): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ 'ಟಿವಿಕೆ' ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಗಡಿ (118) ತಲುಪಲು ವಿಫಲವಾಗಿದೆ. ಈ ಅತಂತ್ರ ಸ್ಥಿತಿಯ ನಡುವೆಯೇ ಈಗ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಆರಂಭವಾಗಿದ್ದು, ಕೇವಲ 2 ಸ್ಥಾನ ಗೆದ್ದಿರುವ ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.

ದಳಪತಿ ವಿಜಯ್ ಅವರ ಟಿವಿಕೆ ಸದ್ಯ 116 ಶಾಸಕರ ಬೆಂಬಲ ಹೊಂದಿದೆ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4). ಬಹುಮತಕ್ಕೆ ಇನ್ನು ಕೇವಲ 2 ಶಾಸಕರ ಕೊರತೆಯಿದೆ. ವಿಸಿಕೆ ಪಕ್ಷವು 2 ಸ್ಥಾನಗಳನ್ನು ಗೆದ್ದಿದ್ದು, ಒಂದು ವೇಳೆ ಅವರು ವಿಜಯ್‌ಗೆ ಬೆಂಬಲ ನೀಡಿದರೆ ಟಿವಿಕೆ ಸರ್ಕಾರ ರಚನೆ ಸುಗಮವಾಗಲಿದೆ. ಇಂದು ಸಂಜೆ 4 ಗಂಟೆಗೆ ವಿಜಯ್ ತಮ್ಮ ಮುಂದಿನ ನಿಲುವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ವಿಸಿಕೆಯ ಇಬ್ಬರು ಶಾಸಕರ ಪೈಕಿ ಒಬ್ಬರು ಇನ್ನೂ ಚೆನ್ನೈ ತಲುಪಿಲ್ಲ. ಇಬ್ಬರ ಸಹಿ ಸಿಕ್ಕ ಬಳಿಕವಷ್ಟೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ವಿಸಿಕೆ ಪಟ್ಟು ಹಿಡಿದಿದೆ


Asianet News 1 hour ago
Home Flash News