Select Location
All Locations
State
Region
City / District
4 ದಿನದಲ್ಲಿ ಮಾರ್ಚ್‌ನದ್ದು,10 ದಿನದಲ್ಲಿ ಏಪ್ರಿಲ್‌ನ ಗೃಹಲಕ್ಷ್ಮಿ ಹಣ ಜಮೆ: ಸಚಿವೆ ಲಕ್ಷ್ಮೀ

4 ದಿನದಲ್ಲಿ ಮಾರ್ಚ್‌ನದ್ದು,10 ದಿನದಲ್ಲಿ ಏಪ್ರಿಲ್‌ನ ಗೃಹಲಕ್ಷ್ಮಿ ಹಣ ಜಮೆ: ಸಚಿವೆ ಲಕ್ಷ್ಮೀ

ಬೆಳಗಾವಿ: ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನು 4 -5 ದಿನದಲ್ಲಿ ಹಾಗೂ ಏಪ್ರಿಲ್ ತಿಂಗಳ ಹಣ ಇನ್ನು 8-10 ದಿನದಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು. ತಾಲೂಕಿನ ಬಾಕನೂರು ಗ್ರಾಮದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕೆಲಸ ಮಾಡುವುದೆಂದರೆ ನನಗೆ ಹುಚ್ಚು. 2013ರಲ್ಲಿ ಚುನಾವಣೆಯಲ್ಲಿ ಸೋತ ನಂತರವೂ ಕೆಲಸ ಮಾಡುತ್ತಲೇ ಇದ್ದೆ. ಬೇರೆಯವರಂತೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ, ಕೆಲಸ ಮಾಡುವುದೊಂದೇ ನನಗೆ ಗೊತ್ತು. ಹಿಂದೆ ಆಯ್ಕೆಯಾದವರು ಕೇವಲ ಹಿಂದುತ್ವ ಎಂದುಕೊಂಡು ಓಡಾಡಿದ್ದನ್ನು ಬಿಟ್ಟು ಬೇರೇನೂ ಮಾಡಿಲ್ಲ. ನಾನು ಹೇಳುವುದಿಲ್ಲ, ಮಾಡಿ ತೋರಿಸುತ್ತಿದ್ದೇನೆ ಎಂದರು.


Udayavani 50 minutes ago
Home Flash News