Select Location
All Locations
State
Region
City / District
Kukke Subramanya: ನಾಗಕ್ಷೇತ್ರ ಕುಕ್ಕೆಯಲ್ಲಿ ಇನ್ನು ಮುಂದೆ ದರ್ಶನಕ್ಕೆ ಕಾಯುವ ಕಿರಿಕಿರಿ ಇರಲ್ಲ, ಹೊಸ ವೇಳಾಪಟ್ಟಿ ಜಾರಿಗೆ ತಂದ ಮಂಡಳಿ!

Kukke Subramanya: ನಾಗಕ್ಷೇತ್ರ ಕುಕ್ಕೆಯಲ್ಲಿ ಇನ್ನು ಮುಂದೆ ದರ್ಶನಕ್ಕೆ ಕಾಯುವ ಕಿರಿಕಿರಿ ಇರಲ್ಲ, ಹೊಸ ವೇಳಾಪಟ್ಟಿ ಜಾರಿಗೆ ತಂದ ಮಂಡಳಿ!

ದಕ್ಷಿಣ ಕನ್ನಡ: ರಾಜ್ಯದ ಅತೀ ಶ್ರೀಮಂತ ಮತ್ತು ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆಶ್ರೀ ಸುಬ್ರಹ್ಮಣ್ಯ (Kukke Subramanya) ದೇವಾಲಯದಲ್ಲಿ ದೇವರ (God) ದರ್ಶನ ಸಮಯದಲ್ಲಿ (Time) ಬದಲಾವಣೆ ಮಾಡಲಾಗಿದೆ. ಭಕ್ತರಿಗೆ (Devotees) ಹೆಚ್ಚಿನ ಸಮಯದ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ. ಈ ಮೊದಲು ಮಧ್ಯಾಹ್ನ 1.30ರಿಂದ 3.30ರವರೆಗೆ ದರ್ಶನ ಸ್ಥಗಿತಗೊಳ್ಳುತ್ತಿದ್ದರೂ, ಇದೀಗ ಆಡಳಿತ ಮಂಡಳಿಯ ನಿರ್ಣಯದಂತೆ 2.00ರಿಂದ 3.00ರವರೆಗೆ ಮಾತ್ರ ದರ್ಶನ ಬಂದ್ ಇರಲಿದೆ. ಇದರಿಂದ ಭಕ್ತರಿಗೆ ಹೆಚ್ಚುವರಿ ಒಂದು ಗಂಟೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ.

ಹೊಸ ವ್ಯವಸ್ಥೆಯಂತೆ ಬೆಳಗ್ಗೆ 6.30 ರಿಂದ ಮಧ್ಯಾಹ್ನ 2.00 ರವರೆಗೆ ಹಾಗೂ ಅಪರಾಹ್ನ 3.00 ರಿಂದ ರಾತ್ರಿ 8.30 ರವರೆಗೆ ನಿರಂತರ ದರ್ಶನ ವ್ಯವಸ್ಥೆ ಇರಲಿದೆ. ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಕಾಲ ದರ್ಶನ ಸ್ಥಗಿತಗೊಳ್ಳಲಿದೆ. ಈ ಪರಿಷ್ಕøತ ದರ್ಶನ ವ್ಯವಸ್ಥೆ ಮೇ 10 ರಿಂದಲೇ ಜಾರಿಗೆ ಬಂದಿರುವುದಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕ್ಷೇತ್ರಕ್ಕೆ ದೇಶದೆಲ್ಲೆಡೆಯಿಂದ ಭಕ್ತಾಧಿಗಳು ಬರುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಭಕ್ತರಿಗೆ ದೇವರ ದರ್ಶನ ಯಾವುದೇ ತೊಂದರೆಗಳಿಲ್ಲದೆ ಸಿಗಬೇಕು ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಮಾಡಲಾಗಿದೆ. ಈ ಹಿಂದೆ ಇದ್ದ ದರ್ಶನ ಸಮಯದಲ್ಲಿ ಭಕ್ತರಿಗೆ ನಿಗದಿತ ಸಮಯದೊಳಗೆ ಕ್ಷೇತ್ರವನ್ನು ಸೇರಲು ಅನಾನುಕೂಲವಾದಲ್ಲಿ,


News18 Kannada 56 minutes ago
Home Flash News