Select Location
All Locations
State
Region
City / District
ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ ವಿಧಾನಸಭೆ ವಿಪಕ್ಷ ನಾಯಕ

ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ ವಿಧಾನಸಭೆ ವಿಪಕ್ಷ ನಾಯಕ

ತಿರುವನಂತಪುರ: ಕೇರಳ ವಿಧಾನಸಭೆಯ ಪ್ರಮುಖ ವಿಪಕ್ಷವಾದ ಸಿಪಿಎಂನ ಶಾಸಕಾಂಗ ಸಭೆಯ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಯ್ಕೆಯಾಗಿದ್ದಾರೆ. ಇದರಿಂದ, ವಿಜಯನ್ ಅವರೇ ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗುವುದು ಖಚಿತವಾಗಿದೆ. ತಿರುವನಂತಪುರದಲ್ಲಿ ಗುರುವಾರ ನಡೆದ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷದ ನಾಯಕ ಕೆ.ರಾಧಾಕೃಷ್ಣನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಹಿರಿಯ ಮುಖಂಡರಾದ ಎ. ವಿಜಯರಾಘವನ್‌, ಪಿಣರಾಯಿ ವಿಜಯನ್ ಭಾಗವಹಿಸಿದ್ದರು. ಸಿಪಿಐ(ಎಂ) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ, ವಿಜಯನ್ ಅವರು ಕೇರಳ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. 

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಿಜಯನ್ ಅವರು, ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸೋಲನುಭವಿಸಿದ ಬಳಿಕ ಅಧಿಕಾರ ಕಳೆದುಕೊಂಡರು. ಸತೀಶನ್- ವಿಜಯನ್‌ ಮತ್ತೆ ಮುಖಾಮುಖಿ, ಇಬ್ಬರ ಸ್ಥಾನ ಅದಲು ಬದಲು ಅಷ್ಟೇ: ಪ್ರಸ್ತುತ ವಿಧಾನಸಭೆಯ 140 ಸ್ಥಾನಗಳ ಪೈಕಿ ಎಲ್‌ಡಿಎಫ್ ಕೇವಲ 35 ಸ್ಥಾನಗಳ ಜಯಗಳಿಸಿದೆ. ಮತ್ತೊಂದೆಡೆ, 102 ಸ್ಥಾನಗಳ ಗೆದ್ದಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚಿಸಲು ಸಜ್ಜಾಗಿದೆ. ಪಿಣರಾಯಿ ವಿಜಯನ್‌ ಸರ್ಕಾರ ಇರುವಾಗ ವಿರೋಧ ಪಕ್ಷದ ನಾಯಕರಾಗಿದ್ದ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು, ವಿಧಾನಸಭೆ ಚುನಾವಣೆ ಬಳಿಕ ಈ ಇಬ್ಬರು ನಾಯಕರು ವಿಧಾನಸಭೆಯಲ್ಲಿ ಮತ್ತೆ ಮುಖಾಮುಖಿಯಾಗಲಿದ್ದಾರೆ. ಸ್ಥಾನಗಳು ಮಾತ್ರ ಅದಲು ಬದಲು ಆಗಿರುವುದು ವಿಶೇಷ.


Udayavani 15 minutes ago
Home Flash News