Select Location
All Locations
State
Region
City / District
Big Update: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಹಾಗಾದರೆ ಸಾರಿಗೆ ಇಲಾಖೆಯ ಈ ಪ್ರಕಟಣೆಯನ್ನು ಮೊದಲು ಓದಿ!

Big Update: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಹಾಗಾದರೆ ಸಾರಿಗೆ ಇಲಾಖೆಯ ಈ ಪ್ರಕಟಣೆಯನ್ನು ಮೊದಲು ಓದಿ!

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, VAHAN 4.0 ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ನಿವಾರಣೆ ಮತ್ತು ಬ್ಯಾಕ್‌ಎಂಡ್ ನಿರ್ವಹಣಾ ಕಾರ್ಯ ನಡೆಸಲು ಮೇ 15, 2026 ರಿಂದ ಮೇ 18, 2026 ರವರೆಗೆ ಸಂಪೂರ್ಣ 4 ದಿನಗಳ ಕಾಲ ಎಲ್ಲಾ ಆನ್‌ಲೈನ್ (Online) ವಾಹನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಈ 4 ದಿನಗಳಲ್ಲಿ ಯಾವ ಯಾವ ಸೇವೆಗಳು ಸ್ಥಗಿತಗೊಳ್ಳುತ್ತವೆ ಎಂಬ ಸಂಪೂರ್ಣ ಪಟ್ಟಿ ನೋಡಿ. ಹೊಸ ವಾಹನ ನೋಂದಣಿ, RC (ರೆಜಿಸ್ಟ್ರೇಶನ್ ಸರ್ಟಿಫಿಕೇಟ್) ನವೀಕರಣ, ಒಡೆತನ ವರ್ಗಾವಣೆ, ವಿಳಾಸ ಬದಲಾವಣೆ, ಡುಪ್ಲಿಕೇಟ್ RC, ಹೈಪೋಥಿಕೇಷನ್ ಸೇರ್ಪಡೆ ಮತ್ತು ತೆಗೆಯುವಿಕೆ, ವಾಹನ ತೆರಿಗೆ ಪಾವತಿ, ಪರ್ಮಿಟ್ ಸೇವೆಗಳು, ಫಿಟ್‌ನೆಸ್ ಸರ್ಟಿಫಿಕೇಟ್, NOC (No Objection Certificate), ಆನ್‌ಲೈನ್ ಅಪಾಯಿಂಟ್‌ಮೆಂಟ್ ಸೇರಿದಂತೆ ಇತರೆ ಎಲ್ಲಾ ಆನ್‌ಲೈನ್ ವಾಹನ ಸೇವೆಗಳು ಲಭ್ಯವಿರುವುದಿಲ್ಲ.

ಸಾರಿಗೆ ಇಲಾಖೆ ಎಲ್ಲಾ ವಾಹನ ಮಾಲೀಕರನ್ನು ಈ ನಾಲ್ಕು ದಿನ ಆನ್‌ಲೈನ್ ಸೇವೆ ಬಳಸಲು ಪ್ರಯತ್ನಿಸದಂತೆ ವಿನಂತಿಸಿದೆ. ಅಗತ್ಯ ಕೆಲಸ ಇದ್ದಲ್ಲಿ ನೇರವಾಗಿ RTO ಕಚೇರಿಗೆ ಭೇಟಿ ನೀಡಬಹುದು. ಆದರೆ ಆನ್‌ಲೈನ್ ಸಂಯೋಜನೆ ಇಲ್ಲದ ಕಾರಣ ಕೆಲಸ ವಿಳಂಬವಾಗಬಹುದು ಎಂದು ಎಚ್ಚರಿಸಿದೆ. ಮೇ 19, 2026 ರಿಂದ ಸೇವೆಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ತುರ್ತು ವಾಹನ ಸಂಬಂಧಿ ಕೆಲಸ ಇದ್ದವರು ಈಗಾಗಲೇ ಮುಗಿಸಿಕೊಳ್ಳಿ ಅಥವಾ ಮೇ 19 ರ ನಂತರ ಮಾಡಿ ಸಹಕರಿಸಿ.


News18 Kannada 1 hour ago
Home Flash News