Select Location
All Locations
State
Region
City / District
ಇದುವೇ ಭಾರತದ ಬುಲೆಟ್ ರೈಲೇ? ರೈಲ್ವೆ ಇಲಾಖೆ ಹೇಳಿದ್ದೇನು?

ಇದುವೇ ಭಾರತದ ಬುಲೆಟ್ ರೈಲೇ? ರೈಲ್ವೆ ಇಲಾಖೆ ಹೇಳಿದ್ದೇನು?

ಬೆಂಗಳೂರು: ಮುಂಬೈ–ಅಹಮದಾಬಾದ್ ನಡುವೆ ನಿರ್ಮಾಣವಾಗುತ್ತಿರುವ ದೇಶದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಮಾರ್ಗದ ಕಾಮಗಾರಿ ವೇಗವಾಗಿ ಸಾಗಿದೆ. ಏತನ್ಮಧ್ಯೆ, ಈ ಮಾರ್ಗದಲ್ಲಿ ಸಂಚರಿಸುವ ಬುಲೆಟ್ ರೈಲಿನ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಚಿತ್ರ ಸಾಮಾಜಿಕ ತಾಣಗಳಲ್ಲಿ ಗಮನ ಸೆಳೆದಿತ್ತು. ದೆಹಲಿ ರೈಲ್ವೆ ಮಂಡಳಿಯ ಕಚೇರಿಯಲ್ಲಿ ಬುಲೆಟ್ ಮಾದರಿಯ ದೊಡ್ಡ ಚಿತ್ರವನ್ನು ಅನಾವರಣಗೊಳಿಸಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆ ಅದುವೇ ನಿಜವಾದ ಬುಲೆಟ್ ರೈಲಲ್ಲ. ಅದು ಬುಲೆಟ್‌ ರೈಲಿನ ರೂಪ ಅಷ್ಟೇ ಎಂದು ತಿಳಿಸಿದೆ. 2027ಕ್ಕೆ ಮುಂಬೈ–ಅಹಮದಾಬಾದ್ ನಡುವೆ ಬುಲೆಟ್ ರೈಲು ಸಂಚರಿಸಲಿದೆ ಎನ್ನಲಾಗಿದೆ. ಈ ರೈಲು ಗಂಟೆಗೆ 300 ರಿಂದ 500 ಕಿ.ಮೀವರೆಗೆ ಸಂಚರಿಸಲಿದೆ.


Prajavani 14 minutes ago
Home Flash News