Select Location
All Locations
State
Region
City / District
ಗಣಿತದ 80 ವರ್ಷ ಹಳೆಯ ಸಮಸ್ಯೆ ಬಿಡಿಸಿದ OpenAI

ಗಣಿತದ 80 ವರ್ಷ ಹಳೆಯ ಸಮಸ್ಯೆ ಬಿಡಿಸಿದ OpenAI

ಗಣಿತದ 80 ವರ್ಷಗಳಷ್ಟು ಹಳೆಯ ಸಮಸ್ಯೆಯೊಂದನ್ನು ಬಿಡಿಸಿರುವುದಾಗಿ ಕೃತಕ ಬುದ್ಧಿಮತ್ತೆ ಸಾಧನ OpenAI ಹೇಳಿಕೊಂಡಿದೆ. ಹಂಗೇರಿಯ ಗಣಿತಜ್ಞ ಪೌಲ್ ಎರಡೋಸ್ ಅವರು, ಒಂದು ಸಮತ್ತಟ್ಟಾದ ಹಾಳೆಯ ಮೇಲೆ ಚುಕ್ಕಿಗಳ ಗುಂಪನ್ನು ರಚಿಸಿದರೆ, ಅವುಗಳ ನಡುವೆ ಸಮಾನಾಂತರವಾಗಿರುವ ಎಷ್ಟು ಬಗೆಯ ಜೋಡಿ ಚುಕ್ಕಿಗಳನ್ನು ರಚಿಸಲು ಸಾಧ್ಯ? ಎಂಬ ಸರಳ ಪ್ರಶ್ನೆಯನ್ನು 1946ರಲ್ಲಿ ಇಟ್ಟಿದ್ದರು. ಇದು ಒಂದರ್ಥದಲ್ಲಿ ಭಾರತದ ಪ್ರತಿ ಮನೆಯ ಮುಂದೆಯೂ ಕಾಣಸಿಗುವ ತರಹೇವಾರಿ ರಂಗೋಲಿಯ ಚುಕ್ಕಿಗಳಂತೆಯೇ. ಆದರೆ, ಇದಕ್ಕೆ ದಶಕಗಳಿಂದಲೂ ಸ್ಪಷ್ಟ ಹಾಗೂ ವೈಜ್ಞಾನಿಕ ಉತ್ತರ ದೊರೆತಿರಲಿಲ್ಲ. 

ಬಹಳಷ್ಟು ಗಣಿತಜ್ಞರು ನಂಬಿದಂತೆ, ಚೌಕಾಕಾರದ ಅಳತೆಯಲ್ಲಿ ನಿರ್ದಿಷ್ಟ ನಮೂನೆಯ ಗರಿಷ್ಠ ಚುಕ್ಕಿಗಳು ಹಿಡಿಸುತ್ತವೆ ಎಂಬುದೇ ಬಲವಾದ ಉತ್ತರ ಎಂದಿದ್ದರು. ಆದರೆ, ಒಪನ್‌ಎಐ ಇಂಥದ್ದೊಂದು ಸವಾಲನ್ನು ಪರಿಹರಿಸುವುದರೊಂದಿಗೆ, ಬಹುವರ್ಷಗಳಿಂದ ಇದ್ದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದೆ. ಕೇವಲ ಒಂದೇ (2X2 ಅಥವಾ 3X3) ನಮೂನೆಯ ಜೋಡಿ ಸಂಖ್ಯೆಗಳನ್ನಷ್ಟೇ ಹೇಳುವುದಲ್ಲದೆ, ಗಣಿತದ ಹಲವು ವಿಷಯಗಳ ನಡುವಿನ ವ್ಯತ್ಯಾಸವನ್ನೂ ಈ ಲೆಕ್ಕದ ಮೂಲಕ ಪತ್ತೆ ಮಾಡಿದೆ. ಕೇವಲ ಒಂದೇ ನಮೂನೆಯ ಸಂಖ್ಯೆಗಳನ್ನು ಮಾತ್ರ ಉಲ್ಲೇಖಿಸಿದೆ, ಹಲವು (2X2, 3X3, 4X4, 5X5) ನಮೂನೆಯ ಸಂಖ್ಯೆಗಳ ಗುಂಪನ್ನು ಜೋಡಿಸಬಹುದು ಎಂದು ಸೂಚಿಸಿದೆ. 

ಈ ಮೂಲಕ, ಸಮತ್ತಟ್ಟಾದ ಹಾಳೆಯ ಮೇಲೆ ಅಸಂಖ್ಯ ನಮೂನೆಯ ಜೋಡಿಗಳನ್ನು ರಚಿಸಲು ಸಾಧ್ಯ ಎಂದು ತಿಳಿಸಿದೆ. ಇದುವರೆಗೂ ನಂಬಲಾಗಿದ್ದ ಸಿದ್ಧಾಂತಗಳಿಗೂ ಮೀರಿದ ಈ ಪರಿಹಾರವು, ಚುಕ್ಕಿಗಳ ಜೋಡಣೆಯ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. OpenAI ಕಂಡುಕೊಂಡಿರುವ ಪರಿಹಾರದ ಕುರಿತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗಣಿತಜ್ಞ ತಿಮೋತಿ ಗೋವರ್ಸ್ ಪ್ರತಿಕ್ರಿಯಿಸಿದ್ದಾರೆ. ‘ಈ ಹಿಂದೆ ಎಐ ಮೂಲಕ ರಚಿಸಲಾದ ಯಾವುದೇ ಪುರಾವೆಗಳು ಇಷ್ಟು ಸಮೀಪದ ಪರಿಹಾರ ಸೂಚಿಸಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಎಐ ಮೂಲಕ ಸೃಜಿಸಲಾದ ಅತ್ಯಂತ ಆಸಕ್ತಿದಾಯಕ ಫಲಿತಾಂಶ ಇದು’ ಎಂದು ಟೊರೊಂಟೊ ವಿಶ್ವವಿದ್ಯಾಲಯದ ಗಣಿತಜ್ಞ ಡೇನಿಯಲ್ ಲಿಟ್ ಪ್ರತಿಕ್ರಿಯಿಸಿದ್ದಾರೆ.


Prajavani 50 minutes ago
Home Flash News