Select Location
All Locations
State
Region
City / District
Lambodhara 2.0 Movie:ಸುನಿ ಲಂಬೋದರನಿಗೆ ಕುನಾಲ್‌ ಕಪೂರ್‌ ಸಾಥ್‌

Lambodhara 2.0 Movie:ಸುನಿ ಲಂಬೋದರನಿಗೆ ಕುನಾಲ್‌ ಕಪೂರ್‌ ಸಾಥ್‌

ಸಿಂಪಲ್‌ ಸುನಿ ನಿರ್ದೇಶನದ ಹೊಸ ಚಿತ್ರ "ಲಂಬೋದರ 2.0'ನಲ್ಲಿ ಕುನಾಲ್‌ ಕಪೂರ್‌ ಅವರು ಈ ಸಿನಿಮಾದಲ್ಲಿ ಅತ್ಯಂತ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಅನಿಲ್‌ ಶೆಟ್ಟಿ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಾಚಿ ಬಿಂದ್ರಾ ನಾಯಕಿ. ಲಂಬೋಧರ 2.0 ಇಂದಿನ ಸಾಮಾಜಿಕ ಜಾಲತಾಣಗಳ ಪ್ರಭಾವದಲ್ಲಿ ಬದುಕುತ್ತಿರುವ ಯುವ ಜನಾಂಗದ ಗೊಂದಲಭರಿತ ಜೀವನವನ್ನು ಅನ್ವೇಷಿಸುವ ಕಥೆಯನ್ನು ಹೊಂದಿದೆ. ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಸಂತೋಷ, ಸಾಮಾಜಿಕ ಮಾನ್ಯತೆ, ಏಕಾಂತ, ಡಿಜಿಟಲ್‌ ಅಡಿಕ್ಷನ್‌ ಹಾಗೂ ನಿಯಂತ್ರಣದಂತಹ ಸಮಕಾಲೀನ ವಿಚಾರಗಳನ್ನು ಚಿತ್ರವು ಒಳಗೊಂಡಿದೆ.

ಚಿತ್ರದ ಅಂತಿಮ ಹಂತದ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಬಿಡುಗಡೆ ಯಾಗಲಿದೆ. ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ, ವೀರ್‌ಸಮರ್ಥ ಸಂಗೀತ ನಿರ್ದೇಶನವಿದೆ. ಅನಿಲ್‌ ಶೆಟ್ಟಿ ಅವರ ಮಾಸ್‌ ಪ್ರೊಡಕ್ಷನ್‌ ಈ ಸಿನಿಮಾವನ್ನು ನಿರ್ಮಿಸುತ್ತಿದೆ.


Udayavani 55 minutes ago
Home Flash News