Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್!
ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರೆ. ದಳಪತಿ ವಿಜಯ್ (Vijay), ನಯನತಾರಾ, ಕಮಲ್ ಹಾಸನ್, ರಾಮ್ ಚರಣ್ (Ram Charan) ಸೇರಿದಂತೆ ದೊಡ್ಡ ಸ್ಟಾರ್ ನಟರೆಲ್ಲ ಹೆಚ್ಚಾಗಿ ಪ್ರೈವೆಟ್ ಜೆಟ್ಗಳಲ್ಲಿ ಓಡಾಡುತ್ತಾರೆ. ಪುಷ್ಪ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೂಡಾ ಹಾಗೆಯೇ. ಅವರ ಪ್ಯಾನ್ ಇಂಡಿಯಾ ಕ್ರೇಜ್ಗೆ ತಕ್ಕಂತೆ ಅವರ ಲೈಫ್ಸ್ಟೈಲ್ ಕೂಡಾ ಅಪ್ಡೇಟ್ ಆಗಿದೆ. ಆದರೇ ಇದೀಗ ಅವರು ತಮ್ಮ ಸಿನಿಮಾ ಶೂಟಿಂಗ್ಗೆಖಾಸಗಿ ಜೆಟ್ ಬಿಟ್ಟು ಸಾಮಾನ್ಯ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಆದರೆ ಯಾಕೆ? ಕೋಟಿಗಟ್ಟಲೆ ಆಸ್ತಿ ಇರೋ ಬನ್ನಿ ಪ್ರೈವೇಟ್ ಜೆಟ್ ಬಿಟ್ಟು ಸಾಮಾನ್ಯರಂತೆ ವಿಮಾನ ಹತ್ತಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ. ಹೌದು, ನೀವು ಕೇಳುತ್ತಿರುವುದು ನಿಜ. “ಪುಷ್ಪ – 2 ದಿ ರೂಲ್” ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಸ್ಟೈಲ್ ಅಥವಾ ಸಿನಿಮಾ ಅಪ್‌ಡೇಟ್‌ನಿಂದ ಅಲ್ಲ. ಅದರ ಬದಲಾಗಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿ.