BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ!
ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು ಬೃಹತ್ ಅಪಾರ್ಟ್‌ಮೆಂಟ್‌ನ ಜನರು ತಮ್ಮ ಒಗ್ಗಟ್ಟು ಹಾಗೂ ಒಂದು 'ಸ್ಮಾರ್ಟ್ ಐಡಿಯಾ' ಮೂಲಕ ನೇರವಾಗಿ ಬಿಎಂಟಿಸಿ ಬಸ್ ಅನ್ನೇ ತಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾರೆ! ಅಧಿಕಾರಿಗಳೇ ಶಾಕ್ ಆಗುವಂತೆ ಇವರು ಮಾಡಿದ ಆ ಮಾಸ್ಟರ್ ಪ್ಲಾನ್ ಆದರೂ ಏನು? ಇಲ್ಲಿದೆ ನೋಡಿ ರೋಚಕ ಸ್ಟೋರಿ! 1,500 ಫ್ಲಾಟ್, ಆದ್ರೆ ಬಸ್ ಹತ್ತಲು 2 ಕಿ.ಮೀ ನಡೀಬೇಕಿತ್ತು! ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಬಿಡಿಎ ಕಮ್ಮಿನಿಕೆ ಅಪಾರ್ಟ್‌ಮೆಂಟ್ಸ್ (BDA Kamminike Apartments) ಬರೋಬ್ಬರಿ 1,500 ಫ್ಲಾಟ್‌ಗಳನ್ನು ಹೊಂದಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲೇ ಇದ್ದರೂ, ಇವರಿಗೆ ಬಸ್ ಹತ್ತಲು ಕನಿಷ್ಠ 1.5 ರಿಂದ 2 ಕಿ.ಮೀ ನಡೆದುಕೊಂಡು ಹೋಗಬೇಕಾದ ಕರ್ಮವಿತ್ತು! ಪ್ರತಿದಿನ ಆಟೋ, ಕ್ಯಾಬ್ ಅಂತಾ ಸಾವಿರಾರು ರೂಪಾಯಿ ಸುರಿದು ಸುಸ್ತಾಗಿದ್ದ ಜನ ಕೊನೆಗೆ ಸಿಡಿದೆದ್ದರು. ಸುಮ್ಮನೆ ಅರ್ಜಿ ಹಿಡಿದುಕೊಂಡು ಹೋದರೆ ಕೆಲಸ ಆಗುವುದಿಲ್ಲ ಎಂದು ಅರಿತ ನಿವಾಸಿಗಳ ಸಂಘ, ತಾವೇ ಖುದ್ದಾಗಿ ಒಂದು ಬೃಹತ್ ಸರ್ವೆ ನಡೆಸಿತು! ಯಾರು ಎಲ್ಲಿಗೆ ಹೋಗುತ್ತಾರೆ? ಆಫೀಸ್ ಟೈಮಿಂಗ್ಸ್ ಏನು? ಸಾರ್ವಜನಿಕ ಸಾರಿಗೆ ಎಷ್ಟು ಜನರಿಗೆ ಬೇಕು? ಈ ಎಲ್ಲಾ ಪಕ್ಕಾ ಲೆಕ್ಕಾಚಾರದ ಡೇಟಾವನ್ನು ಕಲೆಹಾಕಿದರು. 39% ಜನ ಮೆಜೆಸ್ಟಿಕ್‌ಗೆ ಮತ್ತು 28% ಜನ ಕೆಂಗೇರಿ/ಕೆ.ಆರ್ ಮಾರ್ಕೆಟ್‌ಗೆ ಬಸ್ ಬೇಕು ಎಂದು ವರದಿ ಸಿದ್ಧಪಡಿಸಿ, ನೇರವಾಗಿ ಬಿಎಂಟಿಸಿ ಅಧಿಕಾರಿಗಳ ಮುಂದಿಟ್ಟರು! ಇವರ ಪಕ್ಕಾ ಸಿದ್ಧತೆ ನೋಡಿ 2025ರ ಡಿಸೆಂಬರ್‌ನಲ್ಲಿ ಬಿಡಿಎ (BDA) ಕೂಡ ಇವರ ಬೆಂಬಲಕ್ಕೆ ನಿಂತಿತು.