Select Location
All Locations
State
Region
City / District
ಬಕ್ರೀದ್‌ ಗೆ ಬಲಿ ಕೊಡಲು ಖರೀದಿಸಿದ್ದ ಟ್ರಂಪ್‌ ಹೋಲುವ ಎಮ್ಮೆ ಬಾಂಗ್ಲಾ ಮೃಗಾಲಯಕ್ಕೆ ಶಿಫ್ಟ್!

ಬಕ್ರೀದ್‌ ಗೆ ಬಲಿ ಕೊಡಲು ಖರೀದಿಸಿದ್ದ ಟ್ರಂಪ್‌ ಹೋಲುವ ಎಮ್ಮೆ ಬಾಂಗ್ಲಾ ಮೃಗಾಲಯಕ್ಕೆ ಶಿಫ್ಟ್!

ಢಾಕಾ: ಬಕ್ರೀದ್‌ ಹಬ್ಬದಂದು ಬಲಿ ಕೊಡಲು ಖರೀದಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹೋಲುವ ಎಮ್ಮೆಯನ್ನು ರಕ್ಷಿಸಿ, ಅದನ್ನು ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ನ್ಯೂಸ್‌ ಏಜೆನ್ಸಿ ರಾಯಿಟರ್ಸ್‌ ಗುರುವಾರ (ಮೇ 28) ವರದಿ ಮಾಡಿದೆ. ಸುಮಾರು 700 ಕೆಜಿ ತೂಕದ ಎಮ್ಮೆಯ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ನಂತರ, ಇದರ ಮುಖ, ಕೂದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರೀತಿ ಹೋಲುತ್ತಿದೆ ಎಂದು ಅದಕ್ಕೆ ಡೊನಾಲ್ಡ್‌ ಟ್ರಂಪ್‌ ಎಮ್ಮೆ ಎಂದು ಗುರುತಿಸುವ ಮೂಲಕ ಜಾಲತಾಣದಲ್ಲಿ ವೈರಲ್‌ ಆಗಿ ಲಕ್ಷಾಂತರ ವೀಕ್ಷಣೆ ಪಡೆದಿತ್ತು.

ಈ ಎಮ್ಮೆಯನ್ನು ಮೊದಲು ಅದರ ಮಾಲೀಕ 38 ವರ್ಷದ ಜಿಯಾ ಉದ್ದೀನ್ ಮೃಧಾ ಮಾರಾಟ ಮಾಡಿದ್ದರು. ಆದರೆ ಅದನ್ನು ಬಲಿಕೊಡಬಾರದು ಎಂಬ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ, ಸರ್ಕಾರಿ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಎಮ್ಮೆ ರಕ್ಷಣೆಗಾಗಿ ಮಧ್ಯಪ್ರವೇಶಿಸಿದ್ದಾರೆ. ಅಧಿಕಾರಿಗಳು ಎಮ್ಮೆಯನ್ನು ಖರೀದಿಸಿ ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯಕ್ಕೆ ವರ್ಗಾಯಿಸಿದ್ದು, ಅಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ವರದಿ ತಿಳಿಸಿದೆ. ವೈರಸ್‌ನಿಂದ ಎಮ್ಮೆಯನ್ನು ರಕ್ಷಿಸಲು ಮತ್ತು ಸಂದರ್ಶಕರಿಗೆ ಅದನ್ನು ಸುರಕ್ಷಿತವಾಗಿ ನೋಡುವ ಅವಕಾಶವನ್ನು ನೀಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. 

ಈಗ ಈ ಎಮ್ಮೆಯನ್ನು ನಿಗದಿಪಡಿಸಿದ ಕೋಣೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಕಾಳಜಿಯಿಂದಾಗಿ ಎಮ್ಮೆಯನ್ನು ರಕ್ಷಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಕೊನೆಯ ಕ್ಷಣದಲ್ಲಿ, ಭದ್ರತಾ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ಎಮ್ಮೆಯನ್ನು ಬಲಿ ನೀಡದಂತೆ ತಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.


Udayavani 1 hour ago
Home Flash News