K Annamalai: ಹೊಸ ಪಕ್ಷ ಕಟ್ಟುತ್ತಾರಾ ಅಣ್ಣಾಮಲೈ? ಬಿಜೆಪಿ ತೊರೆಯಲು ನಿರ್ಧರಿಸಿದ್ರಾ ಮಾಜಿ ಪೊಲೀಸ್ ಅಧಿಕಾರಿ?
ತಮಿಳುನಾಡು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ (BJP state president) ಕೆಳಕ್ಕಿಳಿದ ನಂತರ ಮಾಜಿ ಪೊಲೀಸ್ ಅಧಿಕಾರಿ (Former police officer) ಕೆ. ಅಣ್ಣಾಮಲೈ (K. Annamalai) ಸೈಲೆಂಟ್ ಆಗಿದ್ರು. ತಮಿಳುನಾಡು ಬಿಜೆಪಿಯಿಂದ (Tamil Nadu BJP) ಅಣ್ಣಾಮಲೈ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ವಿಜಯ್ ದಳಪತಿ (Vijay Thalapathy) ಅವರ ಟಿವಿಕೆ (TVK) ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವದಂತಿ ಹರಡಿತ್ತು. ಇದೀಗ ಕೆ ಅಣ್ಣಾಮಲೈ ಬಿಜೆಪಿ ತೊರೆದು, ಹೊಸ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೂನ್ 4ರಂದು ಅಣ್ಣಾಮಲೈ ಹುಟ್ಟುಹಬ್ಬವಿದ್ದು, ಅಂದು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ತೊರೆಯುತ್ತಾರಾ ಅಣ್ಣಾಮಲೈ? ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೊಸ ಪಕ್ಷವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂಬ ರೂಮರ್ಸ್ ತಮಿಳುನಾಡಿನಾದ್ಯಂತ ದಟ್ಟವಾಗಿ ಹರಡಿದೆ. ಅವರು ಪಕ್ಷ ಬಿಟ್ಟು ಹೋಗೋದನ್ನು ತಡೆಯಲು ಬಿಜೆಪಿ ದೆಹಲಿ ಹೈಕಮಾಂಡ್ ಪ್ರಮುಖ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವರದಿಗಳು ಹೇಳಿವೆ. ಆದರೆ ಯಾವುದೂ ಇದುವರೆಗೂ ಸ್ಪಷ್ಟವಾಗಿಲ್ಲ. ಅಣ್ಣಾಮಲೈ ನೇತೃತ್ವದಲ್ಲಿ ಶೇ. 11ರಷ್ಟು ವೋಟ್ ಅಣ್ಣಾಮಲೈ ತಮಿಳು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ, ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸಿ ಶೇಕಡಾ 11ರಷ್ಟು ಮತಗಳನ್ನು ಪಡೆಯಿತು. ಅಣ್ಣಾಮಲೈ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ, ಎಐಎಡಿಎಂಕೆ ಜೊತೆ ಬಲವಾದ ಮೈತ್ರಿ ಮಾಡಿಕೊಂಡಿದ್ದರೂ ಬಿಜೆಪಿ ಕೇವಲ ಶೇಕಡಾ 3 ರಷ್ಟು ಮತಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು.
ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದಾಗ, ಅವರ ತೀಕ್ಷ್ಣ ಭಾಷಣಗಳು ಮತ್ತು ಬಿಡುವಿಲ್ಲದ ಪ್ರಚಾರದಿಂದ ಅನೇಕ ಯುವಕರು ಪ್ರಭಾವಿತರಾದರು. ಆದರೆ ಅತ್ತ ತಮಿಳುನಾಡು ರಾಜಕೀಯಕ್ಕೆ ಹೊಸಬರಾದ ವಿಜಯ್ ನೇತೃತ್ವದ ಟಿವಿಕೆ ಎದುರಿಸಿದ ಮೊದಲ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಡಿಎಂಕೆ ಮತ್ತು ಎಐಎಡಿಎಂಕೆ ಮಾತ್ರವಲ್ಲದೆ ಎಲ್ಲಾ ಪಕ್ಷದ ಮತಗಳನ್ನು ನಿಯಂತ್ರಿಸಿದ ಟಿವಿಕೆ, ಬಿಜೆಪಿಯ ಮತ ಪಾಲನ್ನು ಸಹ ಕಡಿಮೆ ಮಾಡಿತು.