Select Location
All Locations
State
Region
City / District
ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ತನ್ನ ಕೈ ಕಟ್ಟಿಹಾಕಿಕೊಂಡಿದೆ: ಬಿ.ವೈ ವಿಜಯೇಂದ್ರ

ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ತನ್ನ ಕೈ ಕಟ್ಟಿಹಾಕಿಕೊಂಡಿದೆ: ಬಿ.ವೈ ವಿಜಯೇಂದ್ರ

ಬೀದರ್: ಭ್ರಷ್ಟಾಚಾರ ಮತ್ತು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬಿಟ್ಟರೆ, ರಾಜ್ಯದಲ್ಲಿ ಮೂರು ವರ್ಷ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ತನ್ನ ಕೈ ಕಟ್ಟಿಹಾಕಿಕೊಂಡಿದೆ. ಅನುದಾನದ ಕೊರತೆಯಿಂದ ಡಿ.ಕೆ ಶಿವಕುಮಾರ ಅವರಿಗೂ ರಾಜ್ಯದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ ಎಂದರು.

ಮಾಲ್‌ನ ಮ್ಯಾನೇಜರ್ ಕಿಶೋರ್ ಎಂಬಾತ ಮೃತ ಲಕ್ಷ್ಮೀಕಾಂತಗೆ ಕಂಪೆನಿಯ ಹಣ ತಿಂದಿದ್ದಿ ಎಂದು ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದು ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ತನ್ನ ಹಿರಿಯ ಸಹೋದರ ಓಂಕಾರನಿಗೆ ಈ ಕುರಿತು ವಾಯ್ಸ್ ಮೆಸೇಜ್ ಮಾಡಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ, ಹಣ ತಿಂದಿಲ್ಲ ಎಂದು ಅಳುತ್ತ ಹೇಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ಮಗನ ಸಾವಿಗೆ ಕಾರಣನಾದ ಮಾಲ್‌ನ ಮ್ಯಾನೇಜರ್ ಕಿಶೋರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.


Udayavani 55 minutes ago
Home Flash News