Select Location
All Locations
State
Region
City / District
Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್!

Music-brain Health Centre: ಭಾರತದಲ್ಲೇ ಮೊದಲು, ಬೆಂಗಳೂರಿನಲ್ಲಿ ಸಂಗೀತ-ಆರೋಗ್ಯ ಕೇಂದ್ರ ಸ್ಥಾಪನೆ, ಇಳಯರಾಜ ಸಾಥ್!

ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ (Music-Brain Health Centre ) ಬೆಂಗಳೂರಿನಲ್ಲಿಯೇ ಆರಂಭವಾಗುತ್ತಿರುವುದು ಹೆಮ್ಮೆಗೆ ಕಾರಣವಾಗಿದೆ. ಹೌದು, ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಪದ್ಮವಿಭೂಷಣ ಡಾ. ಇಳಯರಾಜ (Isaignani Ilaiyaraaja) ಅವರ ಆಶ್ರಯದಲ್ಲಿ ಈ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ನರವಿಜ್ಞಾನ, ಮಾನಸಿಕ ಆರೋಗ್ಯ, ಸಂಗೀತ ಮತ್ತು ಮಾನವ ಯೋಗಕ್ಷೇಮವನ್ನು ಒಟ್ಟುಗೂಡಿಸುವ ಕೇಂದ್ರವಾಗಲಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರು , ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ ಸಂಗೀತ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡುತ್ತಿರುವುದಾಗಿ ಘೋಷಣೆ ಮಾಡಿದೆ. ಈ ಕುರಿತು ಒಡಂಬಡಿಕೆ ಮಾಡಿಕೊಂಡಿದ್ದು, ಸಂಗೀತ ಸಂಯೋಜಕ ಇಳಯರಾಜ ಅವರ ಆಶ್ರಯದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ. ಈ ಕೇಂದ್ರವು ಸಂಗೀತ, ನರವಿಜ್ಞಾನ, ಮಾನಸಿಕ ಆರೋಗ್ಯ ಹಾಗೂ ಸಮಗ್ರ ಆರೋಗ್ಯ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳುತ್ತದೆ. ಅಲ್ಲದೇ, ಈ ಬಗ್ಗೆ ಶಿಕ್ಷಣ ನೀಡುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಿದೆ ಎಂದು ನಿಮ್ಹಾನ್ಸ್ ತಿಳಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇಳಯರಾಜ ಅವರ ಸಂಗೀತ, ಮನುಷ್ಯನ ಅನುಭವಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಸಂಗೀತ ಆರೋಗ್ಯ ಕೇಂದ್ರದ ಸ್ಥಾಪನೆಯೂ ಈ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿಯನ್ನು ನೀಡಲಿದೆ. ಅಲ್ಲದೇ, ಸಂಗೀತ, ಮೆದುಳು, ಮನಸ್ಸು ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಸಂಗೀತವೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿದ್ದು, ಕಲೆ ಮತ್ತು ನರವಿಜ್ಞಾನದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.


News18 Kannada 1 hour ago
Home Flash News