Select Location
All Locations
State
Region
City / District
West Bengal: 4,800 ಅಕ್ರಮ ನುಸುಳುಕೋರರು ಬಾಂಗ್ಲಾದೇಶಕ್ಕೆ ವಾಪಸ್; ಸಿಎಂ ಸುವೇಂದು ಅಧಿಕಾರಿ

West Bengal: 4,800 ಅಕ್ರಮ ನುಸುಳುಕೋರರು ಬಾಂಗ್ಲಾದೇಶಕ್ಕೆ ವಾಪಸ್; ಸಿಎಂ ಸುವೇಂದು ಅಧಿಕಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಸ್ಥಾಪಿಸಲಾದ ಹೋಲ್ಡಿಂಗ್ ಸೆಂಟರ್‌ಗಳಿಂದ (Holding Centres) ಸುಮಾರು 4,800 ಅಕ್ರಮ ನುಸುಳುಕೋರರನ್ನು ಯಶಸ್ವಿಯಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ಇನ್ನೂ 836 ಅಕ್ರಮ ವಲಸಿಗರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಜೆಪಿಯ ವಿಶೇಷ ತರಬೇತಿ ಶಿಬಿರದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ರಮ ನುಸುಳುವಿಕೆಯನ್ನು ತಡೆಯುವುದು ಮತ್ತು ಭಾರತ-ಬಾಂಗ್ಲಾದೇಶ ಗಡಿಯನ್ನು ಭದ್ರಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ" ಎಂದು ಸ್ಪಷ್ಟಪಡಿಸಿದರು. ಗಡಿ ಬೇಲಿ ನಿರ್ಮಾಣಕ್ಕೆ ಬಿಎಸ್‌ಎಫ್‌ಗೆ ಜಮೀನು ಹಸ್ತಾಂತರ ರಾಜ್ಯದ ಗಡಿಯಲ್ಲಿ ಇನ್ನು 556 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಬೇಕಾಗಿದ್ದು, ಈ ಪೈಕಿ ಸುಮಾರು 100 ಕಿಲೋಮೀಟರ್ ಉದ್ದದ ಬೇಲಿ ನಿರ್ಮಾಣಕ್ಕಾಗಿ ಗಡಿ ಭದ್ರತಾ ಪಡೆಗೆ (BSF) ರಾಜ್ಯ ಸರ್ಕಾರ ಈಗಾಗಲೇ ಭೂಮಿಯನ್ನು ಹಸ್ತಾಂತರಿಸಿದೆ ಎಂದು ತಿಳಿಸಿದರು. ಅದರಲ್ಲೂ ವಿಶೇಷವಾಗಿ ಉತ್ತರ ಬಂಗಾಳದ ಆಯಕಟ್ಟಿನ ಪ್ರದೇಶವಾದ 'ಚಿಕನ್ಸ್ ನೆಕ್' (Chicken's Neck - ಸಿಲಿಗುರಿ ಕಾರಿಡಾರ್) ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಸಿಲಿಗುರಿ ಕಾರಿಡಾರ್ ಈಶಾನ್ಯ ರಾಜ್ಯಗಳನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ.


Udayavani 1 hour ago
Home Flash News