Select Location
All Locations
State
Region
City / District
Bharat Innovates 2026: ಭಾರತದ ತಂತ್ರಜ್ಞಾನದ ಬಗ್ಗೆ ಜಗತ್ತಿನ ಮುಂದೆ ಹಾಡಿ ಹೊಗಳಿದ ಮೋದಿ! ಫ್ರಾನ್ಸ್​​ನಿಂದ ಸ್ಪೆಷಲ್​ ಮೆಸೇಜ್​

Bharat Innovates 2026: ಭಾರತದ ತಂತ್ರಜ್ಞಾನದ ಬಗ್ಗೆ ಜಗತ್ತಿನ ಮುಂದೆ ಹಾಡಿ ಹೊಗಳಿದ ಮೋದಿ! ಫ್ರಾನ್ಸ್​​ನಿಂದ ಸ್ಪೆಷಲ್​ ಮೆಸೇಜ್​

ಪ್ರಧಾನಿ ನರೇಂದ್ರ ಮೋದಿ (PM Narendra Modi) ಫ್ರಾನ್ಸ್‌ನ (France) ನೈಸ್ ನಗರದಲ್ಲಿ ನಡೆದ ‘ಭಾರತ್ ಇನ್ನೋವೇಟ್ಸ್ 2026’ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತಂತ್ರಜ್ಞಾನವನ್ನು (Indian Technology) ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಈ ಭಾರತ್​ ಇನ್ನೋವೇಟ್ಸ್​​ ಉಪಕ್ರಮವನ್ನು ಜಗತ್ತಿಗೆ ಭಾರತ ನೀಡಿರುವ ವಿಶೇಷ ಆಹ್ವಾನವೆಂದು ವಿವರಿಸಿದ್ದಾರೆ. ‘ಭಾರತ್ ಇನ್ನೋವೇಟ್ಸ್’ ಎಂಬುದು ಕೇವಲ ಒಂದು ಕಾರ್ಯಕ್ರಮವಲ್ಲ, ಜಾಗತಿಕ ಹೊಸತನದ ಭವಿಷ್ಯವನ್ನು ಭಾರತ ಜತೆ ಸೇರಿ ರೂಪಿಸೋಣ ಎಂಬ ಕರೆಯಾಗಿದೆ ಎಂದು ಹೇಳಿದರು.

ಈ ಮೊದಲು ಭಾರತ ತಂತ್ರಜ್ಞಾನವನ್ನು ಬಳಕೆ ಮಾಡುವ, ಅಳವಡಿಸಿಕೊಳ್ಳುವ ದೇಶವಾಗಿ ಮಾತ್ರ ಜಗತ್ತು ನೋಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗ ಭಾರತ ತಂತ್ರಜ್ಞಾನವನ್ನು ಕೇವಲ ಬಳಸುವಷ್ಟೇ ಅಲ್ಲ, ಇತರ ದೇಶಗಳಿಗೆ ತಂತ್ರಜ್ಞಾನ ಪೂರೈಕೆ ಮಾಡುವ, ಪರಿಹಾರಗಳನ್ನು ಒದಗಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಭಾರತದ ತಂತ್ರಜ್ಞಾನ ಶಕ್ತಿ, ಯುವಜನರ ಪ್ರತಿಭೆ ಮತ್ತು ಉದ್ಯಮಶೀಲ ಮನೋಭಾವದ ಫಲ ಎಂದು ಹೇಳಿದ್ದಾರೆ.

‘ಭಾರತದಿಂದ ಹೊರಬರುತ್ತಿರುವ ನವೀನ್ಯತೆಗಳು ಮತ್ತು ಪರಿಹಾರಗಳು ಮಾನವಕುಲದ ದೊಡ್ಡ ಭಾಗಕ್ಕೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿವೆ. ‘ಭಾರತ್ ಇನ್ನೋವೇಟ್ಸ್’ ಈ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನ ಎಲ್ಲ ದೇಶಗಳಿಗೆ, ಬನ್ನಿ, ಭಾರತದ ಜೊತೆಗೂಡಿ ನವೀನ್ಯತೆಯ ಮುಂದಿನ ಅಧ್ಯಾಯವನ್ನು ಬರೆಯೋಣ ಎಂದು ಇದು ಆಹ್ವಾನ ನೀಡುತ್ತದೆ’ ಎಂದು ಮೋದಿ ಹೇಳಿದರು. ನವ ಭಾರತದ ಭವಿಷ್ಯದ ಬಗ್ಗೆ ಮೋದಿ ಮಾತು! ಸಮಾವೇಶದಲ್ಲಿ ಭಾಗವಹಿಸಿದ್ದ ಯುವ ಉದ್ಯಮಿಗಳ ಬಗ್ಗೆ ಮಾತನಾಡುತ್ತಾ, ಅವರು ‘ಇಂದು ಇಲ್ಲಿ ಕೂತಿರುವ ಯುವ ಉದ್ಯಮಿಗಳು ಹೊಸ ಭಾರತದ ಪ್ರತಿನಿಧಿಗಳು. ಇವರಲ್ಲಿ ಆತ್ಮವಿಶ್ವಾಸ, ಶಕ್ತಿ, ಮತ್ತು ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಕೋನ ತುಂಬಿಕೊಂಡಿದೆ. ಇವರ ಮುಖದಲ್ಲಿ ನವ ಭಾರತದ ಭವಿಷ್ಯ ಕಾಣಿಸುತ್ತದೆ’ ಎಂದರು.


News18 Kannada 1 hour ago
Home Flash News