Select Location
All Locations
State
Region
City / District
ಭಾಲ್ಕಿ: ಓದುಗರ ಜ್ಞಾನದಾಹ ತಣಿಸದ ಗ್ರಂಥಾಲಯ

ಭಾಲ್ಕಿ: ಓದುಗರ ಜ್ಞಾನದಾಹ ತಣಿಸದ ಗ್ರಂಥಾಲಯ

ಭಾಲ್ಕಿ: ಓದುಗರ ಜ್ಞಾನದಾಹ ತಣಿಸಿ, ಸಂಸ್ಕಾರಯುತ ಸಮಾಜ ನಿರ್ಮಿಸುವಲ್ಲಿ, ಯುವಕರು, ಮಕ್ಕಳಿಗೆ ಮೊಬೈಲ್ ಗೀಳಿನಿಂದ ದೂರವಿಟ್ಟು ಕೈಯಲ್ಲಿ ಪುಸ್ತಕ ಹಿಡಿಯಲು ಪ್ರೇರೇಪಿಸುವಲ್ಲಿ ಗ್ರಂಥಾಲಯದ ಪಾತ್ರ ಹಿರಿದು. ಆದರೆ, ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಬಾಗಿಲು ಸದಾ ಮುಚ್ಚಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳು, ಅಧ್ಯಯನ ಸಾಮಗ್ರಿಗಳನ್ನು ಉಚಿತವಾಗಿ ಪಡೆಯಲು ಗ್ರಂಥಾಲಯಗಳನ್ನೇ ಅವಲಂಬಿಸಿರುತ್ತಾರೆ. ಆದರೆ, ಇವುಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ಸಕಾಲಕ್ಕೆ ತೆರೆಯದೆ ಇರುವುದು ಸಾರ್ವಜನಿಕರ ಜ್ಞಾನಾರ್ಜನೆಗೆ ಬಹುದೊಡ್ಡ ತಡೆಗೋಡೆಯಾಗಿ ಪರಿಣಮಿಸಿದೆ ಎಂದು ನಾಗರಿಕರು ದೂರುತ್ತಾರೆ. ‘ನಮ್ಮ ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ಉತ್ತಮ ಕಟ್ಟಡ ಇದೆ. ಈಚೆಗೆ ಮತ್ತೆ ಸುಣ್ಣ, ಬಣ್ಣ ಬಳಿಯಲಾಗಿದೆ. ಮುಂಭಾಗದ ಗೋಡೆಯ ಮೇಲೆ ಆಕರ್ಷಕ ಚಿತ್ರಗಳನ್ನು ಕೂಡ ಬಿಡಿಸಲಾಗಿದೆ. ಉತ್ತಮ ಪೀಠೋಪಕರಣ, ಪುಸ್ತಕಗಳು, ಗಣಕಯಂತ್ರ ಸಹ ಇದೆ. ಆದರೆ, ಗ್ರಂಥಾಲಯದ ಬಾಗಿಲು ತೆರೆಯದೆ ಇರುವುದರಿಂದ ಗ್ರಂಥಾಲಯದಲ್ಲಿನ ಪುಸ್ತಕಗಳು ಯಾರ ಬಳಕೆಗೂ ಬಾರದೆ ದೂಳು ಹಿಡಿದಿವೆ’ ಎಂದು ಗ್ರಾಮದ ಪ್ರಮುಖರಾದ ಮಹೇಶ ಸ್ವಾಮಿ, ಸತೀಶ ಮಡಿವಾಳ ಅಳಲು ತೋಡಿಕೊಂಡರು. ‘ಗ್ರಂಥಾಲಯ ಮೇಲ್ವಿಚಾರಕರು ಪ್ರತಿನಿತ್ಯ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಬರುತ್ತಾರೆ. ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ನೀಡಿ ಕೆಲ ಹೊತ್ತಿನ ನಂತರ ಮಾಯವಾಗುತ್ತಾರೆ. ಆದರೆ, ಗ್ರಂಥಾಲಯ ಮಾತ್ರ ತೆರೆಯುವುದಿಲ್ಲ. ಪ್ರತಿ ತಿಂಗಳು ಸಂಬಳ ಮಾತ್ರ ಪಡೆಯುತ್ತಾರೆ. ಇನ್ನು ವಿವಿಧ ದಿನ ಪತ್ರಿಕೆಗಳನ್ನು ಗ್ರಂಥಾಲಯಕ್ಕೆ ಹಾಕಲಾಗಿದೆ ಎಂದು ಬಿಲ್ ಸಹ ಪಡೆಯುತ್ತಾರೆ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.


Prajavani 1 hour ago
Home Flash News