ಕಾಲಿವುಡ್ ಸ್ಟಾರ್ ನಟ ಶಿವಕಾರ್ತಿಕೇಯನ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಖಡಕ್ ರೋಲ್
ಚೆನ್ನೈ: ಕಾಲಿವುಡ್ ಸ್ಟಾರ್ ಶಿವಕಾರ್ತಿಕೇಯನ್ (Sivakarthikeyan) 'ಪರಾಶಕ್ತಿ' ಬಳಿಕ ಕಾಣಿಸಿಕೊಳ್ಳುತ್ತಿರುವ 'ಸಿಯೋನ್' (Seyon Movie) ಚಿತ್ರದ ಕುರಿತಾದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕಮಲ್ ಹಾಸನ್ (Kamal Haasan) ಅರ್ಪಿಸುತ್ತಿರುವ 'ಸಿಯೋನ್' ಈಗಾಗಲೇ ಫಸ್ಟ್ ಲುಕ್ ಪೋಸ್ಟರ್‌ನಿಂದ ಸಖತ್ ಸೌಂಡ್ ಮಾಡಿದೆ. ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. 'ಥಾಯ್ ಕಿಝವಿ' ಚಿತ್ರವನ್ನು ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ 'ಸಿಯೋನ್' ಚಿತ್ರವನ್ನು ನಿರ್ದೇಶನ ಮಾಡಲಿರುವ ಈ ಚಿತ್ರಕ್ಕೆ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪರಾಗಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ (Raj B Shetty) ಅವರು ಎಂಟ್ರಿ ಆಗಿದ್ದಾರೆ.
ಈಗಾಗಲೇ ತನ್ನ ನಟನಾ ಪ್ರತಿಭೆಯಿಂದ ಮಾಲಿವುಡ್ ಚಿತ್ರರಂಗದಲ್ಲಿ ಮಿಂಚಿರುವ ರಾಜ್ ಬಿ ತಮಿಳಿನ ʼಪಾಕೆಟ್ ನಾವೆಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆಯೇ ಅವರು ಶಿವಕಾರ್ತಿಕೇಯನ್ 'ಸಿಯೋನ್' ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳನ್ನು ಖುಷ್ ಆಗಿಸಿದ್ದು, ಕನ್ನಡಿಗರು ಹೆಮ್ಮೆಪಡುವಂತಾಗಿದೆ. ಭಾನುವಾರ (ಜು.5) ಅಂದರೆ ರಾಜ್ ಬಿ ಶೆಟ್ಟಿ ಅವರ ಹುಟ್ಟುಹಬ್ಬದಂದು ʼಸಿಯೋನ್ʼ ಚಿತ್ರ ತಂಡದ ಮೂಲಕ ರಾಜ್ ಬಿ ಶೆಟ್ಟಿ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಪೋಸ್ಟರ್‌ನಲ್ಲಿ ರಾಜ್ ಬಿ ಶೆಟ್ಟಿ ಮುಖ ಕಾಣದಿದ್ರೂ, ಅವರು ರಗಡ್ ಲುಕ್‌ನಲ್ಲಿ ಧಮ್ ಎಳೆಯುತ್ತಿರುವುದನ್ನು ತೋರಿಸಲಾಗಿದೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಲಿದ್ದಾರೆ. ವಿವೇಕ್ ವಿಜಯ್‌ಕುಮಾರ್ ಛಾಯಾಗ್ರಹಣ ಮತ್ತು ಸ್ಯಾನ್ ಲೋಕೇಶ್ ಸಂಕಲನವನ್ನು ನೋಡಿಕೊಳ್ಳಲಿದ್ದಾರೆ. ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ಮತ್ತು ಬಾಲ ಸರವಣನ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕಮಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಇದನ್ನು ನಿರ್ಮಿಸಲಿದ್ದಾರೆ.