Select Location
All Locations
State
Region
City / District
ಪಾಕಿಸ್ತಾನ ಸೇನಾ ಮುಖ್ಯಸ್ಥ ಶಾಂತಿ ರಾಯಭಾರಿಯಲ್ಲ,’ತೈಲ ರಾಯಭಾರಿ’: ಅಸಿಮ್ ಮುನೀರ್ ವಿರುದ್ಧ ಸ್ಫೋಟಕ ವರದಿ ಬಯಲು

ಪಾಕಿಸ್ತಾನ ಸೇನಾ ಮುಖ್ಯಸ್ಥ ಶಾಂತಿ ರಾಯಭಾರಿಯಲ್ಲ,’ತೈಲ ರಾಯಭಾರಿ’: ಅಸಿಮ್ ಮುನೀರ್ ವಿರುದ್ಧ ಸ್ಫೋಟಕ ವರದಿ ಬಯಲು

ಟೆಹ್ರಾನ್, ಜುಲೈ 24: ಸೌದಿ ಅರೇಬಿಯಾ ಮತ್ತು ಇರಾನ್(Iran) ನಡುವೆ ಸೌಹಾರ್ದತೆ ತರಲು ‘ಶಾಂತಿ ರಾಯಭಾರಿ’ಯಂತೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ನಿಜಬಣ್ಣ ಬಯಲಾಗಿದೆ. ಇರಾನ್ ಮತ್ತು ಸೌದಿ ಅರೇಬಿಯಾ ನಡುವಿನ ರಾಜತಾಂತ್ರಿಕ ಒಪ್ಪಂದದ ಹಿಂದೆ ಯಾವುದೇ ಶಾಂತಿಯ ಉದ್ದೇಶವಿರಲಿಲ್ಲ, ಬದಲಿಗೆ ಅಸಿಮ್ ಮುನೀರ್ ಮತ್ತು ಇರಾನ್ ಮಿಲಿಟರಿ ಅಧಿಕಾರಿಯ ‘ಖಾಸಗಿ ತೈಲ ವ್ಯವಹಾರದ’ ಹಿತಾಸಕ್ತಿ ಅಡಗಿತ್ತು ಎಂದು ‘ಟೈಮ್ಸ್ ಆಫ್ ಇಸ್ರೇಲ್’ ಪ್ರಕಟಿಸಿದ ಸ್ಫೋಟಕ ವರದಿಯೊಂದು ಜಗಜ್ಜಾಹೀರುಗೊಳಿಸಿದೆ.

ಇರಾನ್ ಅಧಿಕಾರಿಯೊಂದಿಗೆ ಜಂಟಿ ತೈಲ ಕಂಪನಿ ವರದಿಯ ಪ್ರಕಾರ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ ಅಹ್ಮದ್ ವಹಿದಿ ಸೇರಿ ಜಂಟಿ ತೈಲ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಈ ಕಂಪನಿಯು ಕಳೆದ ಒಂದು ವರ್ಷದಿಂದ ಪಾಕಿಸ್ತಾನಕ್ಕೆ ಇರಾನಿನ ತೈಲವನ್ನು ಪೂರೈಸುತ್ತಿದೆ. ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ದಾಳಿಯನ್ನು ನಿಲ್ಲಿಸುವಂತೆ ಇರಾನ್ ಮನವೊಲಿಸಲು ಮುನೀರ್ ಈ ತೈಲ ವ್ಯವಹಾರದ ಪ್ರಭಾವವನ್ನು ಬಳಸಿಕೊಂಡಿದ್ದಾರೆ. ಇರಾನ್‌ಗೆ ಆರ್ಥಿಕ ಲಾಭ ನೀಡಿ, ಬದಲಿಗೆ ಸೌದಿ ಮೇಲಿನ ದಾಳಿಯನ್ನು ತಡೆಯುವ ‘ಆರ್ಥಿಕ ಸುಲಿಗೆ’ ತಂತ್ರವನ್ನು ಇಲ್ಲಿ ಬಳಸಲಾಗಿದೆ ಎಂದು ಮಧ್ಯಪ್ರಾಚ್ಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

ಕ್ಷಿಪಣಿ ಹಾರಿದಾಗ ಕಂಪನಿಯ ಚಿಂತೆ ಇತ್ತೀಚೆಗೆ ಇರಾನ್ ಮತ್ತೆ ಕ್ಷಿಪಣಿ ದಾಳಿ ನಡೆಸಿದ ತಕ್ಷಣವೇ ಅಸಿಮ್ ಮುನೀರ್ ಇರಾನ್ ಅಧಿಕಾರಿಗೆ ಸಂದೇಶ ಕಳುಹಿಸಿ, “ದಾಳಿ ಮುಂದುವರೆದರೆ ನಮ್ಮ ಜಂಟಿ ತೈಲ ಕಂಪನಿ ತೊಂದರೆಗೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಸೌದಿ ಮೇಲಿನ ದಾಳಿಗಳು ಸಂಪೂರ್ಣ ನಿಂತಿದ್ದವು. ಅಂದರೆ ಮುನೀರ್ ಅವರಿಗೆ ಸೌದಿಯ ಭದ್ರತೆಗಿಂತ ತಮ್ಮ ಖಾಸಗಿ ಬಿಸಿನೆಸ್ ಮುಖ್ಯವಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗಿದೆ. ಅಮೆರಿಕ ನಿರ್ಬಂಧಗಳಿಗೂ ಕ್ಯಾರೇ ಎನ್ನದ ಮುನೀರ್ ಅಮೆರಿಕವು ಇರಾನಿನ ತೈಲ ಬಂದರುಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾಗ್ಯೂ, ಪಾಕಿಸ್ತಾನ ಮತ್ತು ಇರಾನ್ ಗಡಿಗಳ ಮೂಲಕ ಈ ಅಕ್ರಮ ತೈಲ ವಹಿವಾಟು ಅವ್ಯಾಹತವಾಗಿ ಸಾಗಿತ್ತು. ಈ ಕಂಪನಿಯು ಇಬ್ಬರೂ ಸೇನಾಧಿಕಾರಿಗಳಿಗೆ ಭಾರಿ ಮೊತ್ತದ ಆದಾಯ ತಂದುಕೊಡುತ್ತಿದೆ. ಪಾಕಿಸ್ತಾನದ ರಾಜಕೀಯ ಮೇಲಿನ ಪ್ರಭಾವ ಈ ಸ್ಫೋಟಕ ವರದಿ ಹೊರಬಿದ್ದಿದ್ದರೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂಪೂರ್ಣ ಮೌನ ವಹಿಸಿದ್ದಾರೆ. ಸೌದಿ ಅರೇಬಿಯಾ ತನ್ನ ಭದ್ರತೆಗಾಗಿ ಪಾಕಿಸ್ತಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡುವುದು ಮತ್ತು ಶಾಂತಿಯ ನೆಪದಲ್ಲಿ ತಮಗೇ ಸರಿಹೊಂದುವ ‘ಅಕ್ರಮ ತೈಲ ದಂಧೆ’ ನಡೆಸುವುದು ಪಾಕ್ ಸೇನಾ ಮುಖ್ಯಸ್ಥರ ಮುಖ್ಯ ಉದ್ದೇಶವಾಗಿತ್ತು ಎಂಬುದು ಈಗ ಜಾಗತಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


TV9 Kannada 1 hour ago
Home Flash News