Select Location
All Locations
State
Region
City / District
73ರ ನಿರ್ದೇಶಕನಿಂದ 33ರ ನಟಿ ಮೇಲೆ ಅತ್ಯಾಚಾರ ಆರೋಪ: ಬಂಧನ

73ರ ನಿರ್ದೇಶಕನಿಂದ 33ರ ನಟಿ ಮೇಲೆ ಅತ್ಯಾಚಾರ ಆರೋಪ: ಬಂಧನ

ಮುಂಬಯಿ: ಮುಂಬೈನಲ್ಲಿ 33 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ (Director Shakeel Noorani) ಅವರನ್ನು ಬಂಧಿಸಲಾಗಿದೆ. ಮುಂಬರುವ ಹೊಸ ಸಿನಿಮಾದ ಬಗ್ಗೆ ಚರ್ಚಿಸುವ ನೆಪದಲ್ಲಿ ನಿರ್ದೇಶಕನು ನಟಿಯನ್ನು ಮುಂಬೈನ ಮಾಲ್ವಾಣಿಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಪೋಲಿಸ್ ದೂರಿನ ಪ್ರಕಾರ, ನೂರಾನಿ ನಟಿಗೆ ಮಾದಕ ದ್ರವ್ಯ (ನಿದ್ರೆ ಮಾತ್ರೆ) ನೀಡಿ, ಆಕೆಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸಿನಿಮಾದ ವಿಚಾರಕ್ಕೆ ಬಂದರೆ ಶಕೀಲ್ ನೂರಾನಿ "ಬಡೆ ದಿಲ್‌ವಾಲಾ" (1999) ಮತ್ತು "ಜೋರು ಕಾ ಗುಲಾಂ" (2000) ನಂತಹ ಜನಪ್ರಿಯ ಚಿತ್ರಗಳನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿ ಪ್ರಸಿದ್ಧರಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೊರಿವಲಿ ರಜಾದಿನದ ನ್ಯಾಯಾಲಯಕ್ಕೆ (Holiday Court) ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಆಗಸ್ಟ್ 12 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.


Udayavani 1 hour ago
Home Flash News