Select Location
All Locations
State
Region
City / District
ಇರಾನ್ ಒಪ್ಪಂದಕ್ಕೆ ಅಡ್ಡಿಯಾದರೆ ಒಮಾನ್ ಮೇಲೆ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ

ಇರಾನ್ ಒಪ್ಪಂದಕ್ಕೆ ಅಡ್ಡಿಯಾದರೆ ಒಮಾನ್ ಮೇಲೆ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್‌ನೊಂದಿಗಿನ ಒಪ್ಪಂದದ ನಡುವೆ ಒಮಾನ್ ಏನಾದರೂ ಮಧ್ಯ ಪ್ರವೇಶಿಸಿದರೆ, ನಾವು ಅವರ ಮೇಲೆ ಭೀಕರವಾಗಿ ಬಾಂಬ್ ದಾಳಿ ನಡೆಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಫೆ.28ರಿಂದ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿದ್ದು, ಇದು ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಹೊರ್ಮುಜ್ ಜಲಸಂಧಿಯ ಕುರಿತು ಇರಾನ್ ಮತ್ತು ಒಮಾನ್ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿತ್ತು. ಜಲಸಂಧಿಯ ಉತ್ತರ ಭಾಗದಲ್ಲಿ ಇರಾನ್‌ನ ಕರಾವಳಿ ಇದ್ದರೆ, ದಕ್ಷಿಣ ಭಾಗದಲ್ಲಿ ಒಮಾನ್ ಇದೆ. ಟ್ರಂಪ್ ಹೇಳಿಕೆಯ ಕುರಿತು ಒಮಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕದಲ್ಲಿ ಇಂಧನ ಬೆಲೆ ಹೆಚ್ಚಳ ಮತ್ತು ಯುದ್ಧದ ವಿರುದ್ಧ ಸಾರ್ವಜನಿಕರ ವಿರೋಧವು ರಿಪಬ್ಲಿಕನ್ನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದೇ ವರ್ಷದ ನವೆಂಬರ್‌ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಈ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ.


Prajavani 1 hour ago
Home Flash News