ನೇಪಾಲ ಭೂ ಸುನಾಮಿ ಬಗ್ಗೆ 5 ಅನುಮಾನ!: ಚೀನ ವಿರುದ್ಧ ಆಕ್ರೋಶ
ಕಠ್ಮಂಡು: ನೇಪಾಲ-ಟಿಬೆಟ್ ಗಡಿಯಲ್ಲಿ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದ್ದು, ಇದರಿಂದ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿ ಇದು ಭೋಟೆಕೋಶಿ ನದಿಗೆ ಅಡ್ಡಲಾಗಿದ್ದು, ಇದು ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ನೇಪಾಲ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಹೇಳಿದ್ದಾರೆ. ಅದಾಗ್ಯೂ ಪ್ರವಾಹಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ನಡುವೆ ಈ 5 ಕಾರಣಗಳಿಂದ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ದೊಡ್ಡ ಪ್ರಮಾಣದ ಮಣ್ಣು ಮತ್ತು ಕಲ್ಲುಗಳ ಹರಿವು: ಚೀನದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿರುವ ಲೆØಂಡೆ ನದಿಯ ಮೇಲ್ಭಾಗದಲ್ಲಿ ಸಂಭವಿಸಿದ ಭಾರೀ ಪೆರ್ಮಾಫ್ರಾಸ್ಟ್ (ಶಾಶ್ವತವಾಗಿ ಹೆಪ್ಪುಗಟ್ಟಿದ ದೊಡ್ಡ ಪ್ರಮಾಣದ ಮಣ್ಣು ಮತ್ತು ಕಲ್ಲು) ಕುಸಿತವಾಗಿದ್ದು, ಇದರಿಂದ ಭೂಕುಸಿತ ಸೃಷ್ಟಿಸಿಯಾಗಿರಬಹುದು. ಹಿಮನದಿ ಸರೋವರದ ಪ್ರವಾಹ ಎತ್ತರದ ಟಿಬೆಟ್‌ನಲ್ಲಿರುವ ಹಿಮನದಿ ಸರೋವರಗಳು ಆಗಾಗ್ಗೆ ಒಡೆದುಹೋಗುತ್ತವೆ. ಇದು ತತ್‌ಕ್ಷಣವೇ ಲಕ್ಷಾಂತರ ಗ್ಯಾಲನ್ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಪ್ರವಾಹ ಉಂಟಾಗಿರಬಹುದು.
ಹಿಮಪಾತಗಳು ಪ್ರವಾಹ ಉಂಟಾದ ಪ್ರದೇಶದ ಮೇಲ್ಭಾಗದಲ್ಲಿರುವ ಹಿಮ ಶಿಖರಗಳು ಕರಗಿ, ಹಿಮಪಾತ ಉಂಟಾಗಿರಬಹುದು. ಇದರಿಂದಲೂ ಪ್ರವಾಹ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಭೂಕುಸಿತದಿಂದ ನದಿ ಹರಿವು ತಡೆ ಚೀನ ಪ್ರದೇಶಗಳಲ್ಲಿ ಉಂಟಾಗುವ ಭೂಕುಸಿತದಿಂದ ನದಿ ಸುಗಮವಾಗಿ ಹರಿಯಲು ಅಡ್ಡಿ ಉಂಟು ಮಾಡುತ್ತವೆ. ಈ ನಡುವೆ ಹಿಮನದಿ ನೀರು ಜೋರಾಗಿ ಹರಿದಾಗ ಒಮ್ಮೆಲೆ ಕೆಳ ಭಾಗಕ್ಕೆ ಅಪ್ಪಳಿಸಬಹುದು. ಟಿಬೆಟ್‌ನಲ್ಲಿ ಭಾರೀ ಮಳೆ ನೇಪಾಲದ ಸುತ್ತಲೂ ಅಷ್ಟಾಗಿ ಮಳೆ ಬೀಳದಿದ್ದರೂ, ಟಿಬೆಟ್ ಪ್ರಸ್ಥಭೂಮಿಯಲ್ಲಿ ಸುರಿದ ಭಾರೀ ಮಳೆಯಿಂದ ಈ ಪ್ರವಾಹ ಉಂಟಾಗಿರಬಹುದು. ಮೊದಲೇ ಏಕೆ ಎಚ್ಚರಿಸಲಿಲ್ಲ?: ಚೀನ ವಿರುದ್ಧ ಆಕ್ರೋಶ ಪ್ರವಾಹದ ಬಗ್ಗೆ ಮೊದಲೇ ನೀವು ಏಕೆ ಎಚ್ಚರಿಕೆ ನೀಡಲಿಲ್ಲ ಎಂದು ನೇಪಾಲದ ಪತ್ರಕರ್ತರೊಬ್ಬರು ಚೀನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಕರ್ತ ಪರಶುರಾಮ್ ಕಫ್ಲೆ ಎಂಬಾತ ಈ ಪೋಸ್ಟ್ ಮಾಡಿದ್ದು, ಚೀನವನ್ನು "ಉತ್ತರದ ನೆರೆಯ ರಾಷ್ಟ್ರ ಎಂದು ಉಲ್ಲೇಖೀಸಿರುವ ಅವರು, ಪ್ರವಾಹದ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡುವಲ್ಲಿ ಅದು ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಈ ವಿಪತ್ತು ಬಗ್ಗೆ ಮುಂಚೆಯೇ ಎಚ್ಚರಿಕೆ ನೀಡಿದ್ದರೆ ಜನರನ್ನು ಸ್ಥಳಾಂತರ ಮಾಡಬುಹುದಿತ್ತು.
ಇದರಿಂದ ಹೆಚ್ಚು ಜನರ ಜೀವವನ್ನು ಕಾಪಾಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ. ಇಡೀ ಊರು ಬೂದು ಮಣ್ಣಿನ ಸಮುದ್ರದಂತಾಗಿದೆ: ಪ್ರತ್ಯಕ್ಷದರ್ಶಿ ನೇಪಾಲ ಮಹಿಳೆಯೊ ಬ್ಬರು ಪ್ರವಾಹವನ್ನು ಕಂಡಬಗೆಯನ್ನು ವಿವರಿಸಿದ್ದಾರೆ. "ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಏಕಾಏಕಿ ಪ್ರವಾಹ ಉಂಟಾಗಿದೆ. ನಾನು ಗಾಬರಿಯಾಗಿ ಕುಟುಂಬ ದವರಿಗೆ ಕರೆ ಮಾಡಿದೆ. ಆಗ ಅವರು ಮಹಡಿ ಮೇಲೆ ಹೋಗು ಎಂದು ಸೂಚಿಸಿದ್ದರು. ಅವರು ಹೇಳಿದಂತೆ ನಾನು ಮಾಡಿದೆ. ನನ್ನ ಪ್ರಾಣ ಉಳಿಸಿಕೊಂಡೆ. ಆ ಸಮಯದಲ್ಲಿ ಮನೆ ಹೊರಗೆ ಇದ್ದಿದ್ದೇ ನನ್ನ ಅದೃಷ್ಟ'- ಇದು ನೇಪಾಲದಲ್ಲಿ ಉಂಟಾದ ಪ್ರವಾಹವನ್ನು ಪ್ರತ್ಯಕ್ಷವಾಗಿ ನೋಡಿದ ಮಹಿಳೆಯೊಬ್ಬರು ಹೇಳಿದ ಮಾತು. ಟೆರೆಸ್ ಮೇಲಿನಿಂದ ನೋಡುವಾಗ ಬೂದು ಬಣ್ಣದ ಮಣ್ಣಿನ ಸಮುದ್ರದಂತೆ ಕಾಣುತ್ತಿತ್ತು ಎಂದಿದ್ಧಾರೆ. ಜನರಿಗೆ ವಿಷಯ ತಿಳಿಯುವ ಮೊದಲೇ ಚೀನ ಗಡಿಯಲ್ಲಿದ್ದ 2 ಗ್ರಾಮಗಳು ಸಂಪೂರ್ಣ ನಾಶ ಪವಿತ್ರ ಕೈಲಾಸ-ಮಾನಸ ಸರೋವರ ಯಾತ್ರೆಗಾಗಿ ನೇಪಾಲ ಮತ್ತು ಚೀನ ಗಡಿಯಲ್ಲಿ ಉಳಿದುಕೊಂಡಿದ್ದ ಜನ, ಗಡಿ ಭಾಗದಲ್ಲಿನ ಮಾರುಕಟ್ಟೆ, ಸುತ್ತಲಿನ ಹೊಟೇಲ್, ಮನೆಗಳು ಕಣ್ಣುಚ್ಚಿ ತೆಗೆಯುವುದರಲ್ಲಿ ಕೊಚ್ಚಿ ಹೋಗಿದ್ದವು. ನೇಪಾಲದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಪ್ರವಾಹದ ತೀವ್ರತೆ ಎಷ್ಟಿತ್ತು ಎಂದರೆ, 1 ನಿಮಿಷದ ಅಂತರದಲ್ಲೇ 2 ಹಳ್ಳಿಗಳು ಕೊಚ್ಚಿ ಹೋಗಿದ್ದವು.
ನೇಪಾಲದ ಉತ್ತರ ಭಾಗಕ್ಕೆ ನೀರನ್ನು ಪೂರೈಸುವ ತ್ರಿಶೂಲಿ ನದಿ ವ್ಯವಸ್ಥೆಯ ಭಾಗವಾದ ಭೋಟೆಕೋಶಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗುವುದು ತೀರ ಅಪರೂಪ. ಮಳೆಗಾಲದಲ್ಲಿ ಮಾತ್ರ ಈ ನದಿ ತುಂಬಿ ಹರಿಯುತ್ತದೆ. ಉಳಿದಂತೆ ಹಿಮಾಲಯದಿಂದ ಸಣ್ಣ ನದಿಯಂತೆ ನೀರು ಹರಿದುಬರುತ್ತದೆ. ಆದರೆ ಬುಧವಾರ ಬೆಳಗ್ಗೆ ಟಿಬೆಟ್‌ನ ಭಾಗದಿಂದ ಭಾರೀ ಪ್ರಮಾಣದಲ್ಲಿ ಕಲ್ಲು, ಮಣ್ಣು, ಮರಗಳನ್ನು ಹೊತ್ತ ಬೃಹತ್ ಪ್ರಮಾಣದ ನೀರು ನೇಪಾಲಕ್ಕೆ ಅಪ್ಪಳಿಸಿತು. ಇದು ಊಹಿಸಲು ಅಸಾಧ್ಯವಾಗುವ ಮಟ್ಟಿಗೆ ನಾಶವನ್ನು ಮಾಡಿತು. ನದಿ ಅಬ್ಬರಕ್ಕೆ ಸೇತುವೆ ನಾಶ: ಪ್ರವಾಹ ಹರಿಯುತ್ತಿದ್ದ ರಭಸಕ್ಕೆ ಭೋಟೆಕೋಶಿ ನದಿಗೆ ನಿರ್ಮಾಣ ಮಾಡಲಾಗಿದ್ದ 8ಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿ ಹೋದವು. ನೀರಿನ ರಭಸವನ್ನು ಕಂಡ ಕೂಡಲೇ ಹತ್ತಿರ ಬೆಟ್ಟ ಹತ್ತಿದ ಜನ ಪ್ರಾಣಾಪಾಯದಿಂದ ಪಾರಾದರು. ನದಿಯ ರಭಸವು ಮನೆಗಳು, ಬೃಹತ್ ಕಟ್ಟಡಗಳು, ಮೂಲಭೂತ ಸೌಕರ್ಯಕ್ಕಾಗಿ ನಿರ್ಮಾಣ ಮಾಡಿದ್ದ ಎಲ್ಲ ಕಟ್ಟಡಗಳನ್ನು ನಾಶ ಮಾಡಿ ಮುಂದೆ ಸಾಗಿತು.