South India's No.1 Digital Mobile Paper
LIVE
Welcome to Smacy Media

BCCI: ‌ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್, ಏಕದಿನ ಸರಣಿಗೆ ಒಟ್ಟು ಮೂರು ತಂಡ ಪ್ರಕಟ

BCCI: ‌ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್, ಏಕದಿನ ಸರಣಿಗೆ ಒಟ್ಟು ಮೂರು ತಂಡ ಪ್ರಕಟ

ಮುಂಬೈ: ಮುಂಬರುವ ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಮತ್ತು ಟೆಸ್ಟ್‌ ಸರಣಿಗಳಿಗೆ ಆಯ್ಕೆ ಸಮಿತಿಯು ಶುಕ್ರವಾರ (ಅ.16) ತಂಡಗಳನ್ನು ಪ್ರಕಟಿಸಿದೆ. ಏಕದಿನ ಸರಣಿ ಮುಗಿದಾಕ್ಷಣ ಟೆಸ್ಟ್‌ ಸರಣಿ ಆರಂಭವಾಗುವ ಕಾರಣ ಟೆಸ್ಟ್‌ ನ ಪ್ರಮುಖ ಆಟಗಾರರಿಗೆ ಏಕದಿನ ಸರಣಿಯ ಕೊನೆಯ ಎರಡು ತಂಡಗಳಿಂದ ವಿರಾಮ ನೀಡಲಾಗಿದೆ.

ಹೀಗಾಗಿ ಮೊದಲ ಮೂರು ಪಂದ್ಯಗಳಿಗೆ ಒಂದು ತಂಡ ಮತ್ತು ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಮತ್ತೊಂದು ತಂಡ ಪ್ರಕಟಿಸಲಾಗಿದೆ.

ನಾಯಕ ಶುಭಮನ್‌ ಗಿಲ್‌, ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌, ಅನ್ಶುಲ್‌ ಕಾಂಬೋಜ್‌, ಪ್ರಸಿಧ್‌ ಕೃಷ್ಣ ಅವರಿಗೆ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಲಿದ್ದು, ಇಶಾನ್‌ ಕಿಶನ್‌ ಉಪ ನಾಯಕರಾಗಲಿದ್ದಾರೆ. ವಿಕೆಟ್‌ ಕೀಪರ್‌ ಕುಮಾರ್‌ ಕುಶಾಗ್ರ ಅವರು ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.

ಯಶಸ್ವಿ ಜೈಸ್ವಾಲ್‌ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದೇ ವೇಳೆ ರವೀಂದ್ರ ಜಡೇಜಾ ಅವರ ಏಕದಿನ ಆಟವು ಮುಗಿದಂತೆ ಕಾಣುತ್ತಿದ್ದು, ಅವರ ಬದಲಿಗೆ ನಮನ್‌ ಧೀರ್‌ ಆಯ್ಕೆಯಾಗಿದ್ದಾರೆ. ಭುವಿ, ಶಮಿಗೆ ಅವಕಾಶ ನಿರಾಕರಿಸಲಾಗಿದೆ.

ಐದು ಪಂದ್ಯಗಳ ಟಿ20 ಸರಣಿಯ ನಂತರ, ನವೆಂಬರ್ 4 ರಂದು ಏಕದಿನ ಸರಣಿಯು ಪ್ರಾರಂಭವಾಗುತ್ತದೆ.

ಮೊದಲ ಮೂರು ಏಕದಿನಗಳಿಗೆ ತಂಡ: ಶುಭಮನ್ ಗಿಲ್ [ನಾ], ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ [ಉ.ನಾ], ಕೆಎಲ್ ರಾಹುಲ್ [ವಿ.ಕೀ], ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಶ್ದೀಪ್ ಸಿಂಗ್, ಇಶಾನ್ ಕಿಶನ್ [ವಿ.ಕೀ], ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ*, ಕುಲದೀಪ್ ಯಾದವ್.

ನಾಲ್ಕು ಮತ್ತು ಐದನೇ ಏಕದಿನಗಳಿಗೆ ತಂಡ: ಶ್ರೇಯಸ್ ಅಯ್ಯರ್ [ನಾ], ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಇಶಾನ್ ಕಿಶನ್ [ವಿ.ಕೀ, ಉ.ನಾ], ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅಕಿಬ್ ನಬಿ, ಗುರ್ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಶ್ದೀಪ್ ಸಿಂಗ್, ಕುಮಾರ್ ಕುಶಾಗ್ರ [ವಿ.ಕೀ], ಮೊಹಮ್ಮದ್ ಸಿರಾಜ್, ಯಶ್ ಠಾಕೂರ್, ಕುಲದೀಪ್ ಯಾದವ್.

📍 Chennai
📰 Udayavani
🕒 15 days ago

Related News

ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
ಬಿಜೆಪಿ–ಜೆಡಿಎಸ್‌ ಜತೆಗಿದ್ದರಷ್ಟೇ ಗೆಲುವು–ಬಿ.ಎಸ್‌.ಯಡಿಯೂರಪ್ಪ
ಬಿಜೆಪಿ–ಜೆಡಿಎಸ್‌ ಜತೆಗಿದ್ದರಷ್ಟೇ ಗೆಲುವು–ಬಿ.ಎಸ್‌.ಯಡಿಯೂರಪ್ಪ
⬅ Back
➕ Post Ad
To Ads ➡