South India's No.1 Digital Mobile Paper
LIVE
Welcome to Smacy Media

ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ

ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ

ಮಾಸ್ಕೊ: ಅಮೆರಿಕ ವಾಯುಪಡೆಗೆ ಸೇರಿದ ವಿಮಾನವೊಂದು ಮಂಗಳವಾರ ರಷ್ಯಾದ ಮಾಸ್ಕೊದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅದರ ಉದ್ದೇಶ ಅಥವಾ ಪ್ರಯಾಣದ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಷ್ಯಾ ಹೇಳಿದೆ.

ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ ನೋಂದಾಯಿತ ಈ ವಿಮಾನವು ಲಾಟ್ವಿಯಾದ ರಾಜಧಾನಿ ರಿಗಾದಿಂದ ಪ್ರಯಾಣ ಬೆಳೆಸಿ ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 7 ಗಂಟೆಗೆ ಮಾಸ್ಕೊ ತಲುಪಿದೆ. ಈ ಮಾಹಿತಿ ವಿಮಾನಗಳ ಸಂಚಾರದ ಮಾಹಿತಿ ನೀಡುವ ‘ಫ್ಲೈಟ್‌ರಾಡಾರ್24’ ದತ್ತಾಂಶದಿಂದ ತಿಳಿದುಬಂದಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ರಷ್ಯಾದ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್, ಅಮೆರಿಕ ಆಡಳಿತದ ಪ್ರತಿನಿಧಿಗಳೊಂದಿಗೆ ಈ ವಾರ ಯಾವುದೇ ಸಭೆ ನಡೆಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

📍 Bangalore
📰 TV9 Kannada
🕒 18 days ago

Related News

ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ
ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ
Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ
Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
Back
Post Ad
To Ads