South India's No.1 Digital Mobile Paper
LIVE
Welcome to Smacy Media

ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ

ಇಮ್ರಾನ್ ಖಾನ್ ಪುತ್ರರ ಸಂದರ್ಶನ:ಲಾರ್ಡ್ಸ್ ಟೆಸ್ಟ್ ಬಹಿಷ್ಕರಿಸುವುದಾಗಿ ಪಾಕಿಸ್ಥಾನದ ಬೆದರಿಕೆ

ಕ್ರಿಕ್‌ಇನ್‌ಫೋ ವರದಿ ಪ್ರಕಾರ, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ತನ್ನ ತಂಡವನ್ನು ಹಿಂಪಡೆಯುವ ಬಗ್ಗೆಯೂ ಪಿಸಿಬಿ ಚಿಂತಿಸಿತ್ತು. ಮೊದಲ ದಿನ ಸ್ಕೈ ಸ್ಪೋರ್ಟ್ಸ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ ಅವರು ಜೈಲಿನಲ್ಲಿರುವ ಮಾಜಿ ಪಾಕಿಸ್ತಾನ ನಾಯಕ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಅವರ ಪುತ್ರರಾದ ಕಾಸಿಂ ಮತ್ತು ಸುಲೈಮಾನ್ ಖಾನ್ ಅವರೊಂದಿಗೆ ನಡೆಸಿದ್ದ ಪೂರ್ವದಾಖಲಿತ ಸಂದರ್ಶನವನ್ನು ಪ್ರಸಾರ ಮಾಡಿದ್ದೇ ವಿವಾದಕ್ಕೆ ಕಾರಣವಾಯಿತು.

ಬುಧವಾರ ಪಂದ್ಯ ನಡೆದ ಸ್ಥಳದಲ್ಲೇ ಚಿತ್ರೀಕರಿಸಲಾಗಿದ್ದ ಈ ಸಂದರ್ಶನದಲ್ಲಿ, ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ದೃಷ್ಟಿ ಕ್ಷೀಣಿಸುತ್ತಿರುವ ಬಗ್ಗೆ ಅವರ ಪುತ್ರರು ಗಂಭೀರ ಆತಂಕ ವ್ಯಕ್ತಪಡಿಸಿದ್ದರು.

ನೇರ ಪಂದ್ಯದ ಪ್ರಸಾರದಲ್ಲಿ ರಾಜಕೀಯ ವಿಚಾರಗಳನ್ನು ಸೇರಿಸಿರುವುದಕ್ಕೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿತು. ಸಂದರ್ಶನ ಪ್ರಸಾರವಾದರೆ ಮಧ್ಯಾಹ್ನದ ಅವಧಿಯಲ್ಲಿ ತನ್ನ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ನಲ್ಲೇ ಇರಿಸುವುದಾಗಿ ಪಿಸಿಬಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

ಸ್ಕೈ ಸ್ಪೋರ್ಟ್ಸ್ ಸಂದರ್ಶನದ ಪ್ರಸಾರವನ್ನು ಮುಂದೂಡಿ, ಬಳಿಕ ಊಟದ ವಿರಾಮದ ವೇಳೆ ಪ್ರಸಾರ ಮಾಡಿತು. ಇದರ ಬೆನ್ನಲ್ಲೇ ಪಿಸಿಬಿ ಅಧಿಕೃತ ದೂರು ದಾಖಲಿಸಿತು. ಆದರೆ ಅಂತಿಮವಾಗಿ ತನ್ನ ಬೆದರಿಕೆಯಿಂದ ಹಿಂದೆ ಸರಿದ ಪಾಕಿಸ್ಥಾನ ತಂಡ ಮಧ್ಯಾಹ್ನದ ಅವಧಿಯಲ್ಲಿ ಮೈದಾನಕ್ಕಿಳಿಯಿತು. ಈ ದೂರು ಕುರಿತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ)ಗೂ ಮಾಹಿತಿ ನೀಡಲಾಗಿತ್ತು ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಟೆಸ್ಟ್ ಸರಣಿಯ ಪಾಕಿಸ್ಥಾನದ ಪ್ರಸಾರ ವಾಹಿನಿಯಲ್ಲಿ ಈ ಸಂದರ್ಶನ ಪ್ರಸಾರವಾಗಲಿಲ್ಲ ಎನ್ನಲಾಗಿದೆ.

73 ವರ್ಷದ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 2023ರ ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ. ಈ ಪೈಕಿ ಒಂದು ಪ್ರಕರಣದಲ್ಲಿ ಅವರು ದೋಷಿ ಎಂದು ತೀರ್ಪು ನೀಡಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿರುವ ಇಮ್ರಾನ್ ಖಾನ್, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ್ದಾರೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಅವರು ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ.

ಇಮ್ರಾನ್ ಖಾನ್ ಅವರೊಂದಿಗೆ ನಡೆಯುತ್ತಿರುವ ವ

📍 hubli
📰 VijayKarnataka
🕒 16 days ago

Related News

Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ
Bigg Boss: ‘ಬಿಗ್‌ ಬಾಸ್‌ʼ ಮನೆಗೆ ಖ್ಯಾತ ಗಾಯಕನ ಎರಡನೇ ಪತ್ನಿ ಎಂಟ್ರಿ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
Aug 27, 2026, 8:06 PM IST ಮುಂದಿನ 3 ದಿನಗಳಲ್ಲಿ ಮತ್ತೊಂದು ಭೀಕರ ಜಲಪ್ರಳಯದ ಭೀತಿ... ನೇಪಾಳಕ್ಕೆ ಎಚ್ಚರಿಕೆ ನೀಡಿದ ಚೀನಾ
ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ
ಮಾಸ್ಕೊದಲ್ಲಿ ಲ್ಯಾಂಡ್ ಆದ ಅಮೆರಿಕದ ಮಿಲಿಟರಿ ವಿಮಾನ: ಮಾಹಿತಿ ಇಲ್ಲ ಎಂದ ರಷ್ಯಾ
Back
Post Ad
To Ads