IRCTC: ಪಂಚ ಜ್ಯೋತಿರ್ಲಿಂಗ ದರ್ಶನ ವಿಶೇಷ ಯಾತ್ರಾ ಪ್ರವಾಸ ಪ್ಯಾಕೇಜ್…ಟಿಕೆಟ್ ದರ ಎಷ್ಟು
ಜ್ಯೋತಿರ್ಲಿಂಗವು ಭಕ್ತಿಯ ಪ್ರಾತಿನಿಧ್ಯ ಅಥವಾ ಶಿವನ ಪ್ರತಿರೂಪವಾಗಿದೆ. ಮೂಲತಃ ದೇಶದಲ್ಲಿ 64 ಜ್ಯೋತಿರ್ಲಿಂಗಗಳು ಇದ್ದವು ಎಂದು ನಂಬಲಾಗಿದ್ದರೂ, ಅವುಗಳಲ್ಲಿ 12 ಅತ್ಯಂತ ಪವಿತ್ರ ಮತ್ತು ಶುಭವಾಗಿರುವುದರಿಂದ ಅವುಗಳನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಐಆರ್ ಸಿಟಿಸಿ ಭಾರತ್ ಗೌರವ್ ರೈಲಿನ ಮೂಲಕ "ಪಂಚ ಜ್ಯೋತಿರ್ಲಿಂಗ ಯಾತ್ರೆ" ಎಂಬ ವಿಶೇಷ ಪ್ಯಾಕೇಜ್ ಟೂರ್ ಘೋಷಿಸಿದೆ.
ಏನೇನಿದೆ ಪ್ಯಾಕೇಜ್ ನಲ್ಲಿ:
IRCTC/SZ ಈ ಪಂಚ ಜ್ಯೋತಿರ್ಲಿಂಗ ಯಾತ್ರೆ 2025ರ ನವೆಂಬರ್ 21ರಿಂದ ಡಿಸೆಂಬರ್ 1(11 ದಿನಗಳ ಕಾಲ)ರವರೆಗೆ ನಾಗೇಶ್ವರ, ಸೋಮನಾಥ, ಭೀಮಾಶಂಕರ, ತ್ರಯಂಬಕೇಶ್ವರ, ಗ್ರಿಷ್ಣೇಶ್ವರದಲ್ಲಿರುವ ಐದು ಜ್ಯೋತಿರ್ಲಿಂಗ ದೇವಾಲಯಗಳನ್ನು ಮತ್ತು ಎಲ್ಲೋರಾ ಗುಹೆಗಳ ದರ್ಶನಕ್ಕಾಗಿ ತಿರುನಲ್ವೇಲಿ ಮೂಲಕ ಕೇರಳದಿಂದ IRCTC ಭಾರತ್ ಗೌರವ್ ರೈಲು (SZBG24) - “ಪಂಚ ಜ್ಯೋತಿರ್ಲಿಂಗ ಯಾತ್ರೆ” ಆಯೋಜಿಸಿದೆ. ಪ್ರವಾಸಿ ರೈಲು 01- 2AC, 06- 3AC, 04 SL, 01 ಪ್ಯಾಂಟ್ರಿ ಕಾರ್, 02 ಪವರ್ ಕಾರ್‌ಗಳನ್ನು ಒಟ್ಟು 14 ಕೋಚ್‌ಗಳನ್ನು ಒಳಗೊಂಡಿದೆ.