ಸುಂದರ್ ಪಿಚೈ ತಮಿಳುನಾಡಿನವರಾದರೂ 'ಭಾರತ'ವನ್ನು ಆಯ್ಕೆ ಮಾಡಿಕೊಂಡಿದ್ದಾರೆ: ನಾರಾ
ಚೆನ್ನೈ: ಟೆಕ್ ದೈತ್ಯ ಗೂಗಲ್ ಕಂಪನಿಯು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜಾಲ ಸ್ಥಾಪನೆಗಾಗೆ ₹ 1.3 ಲಕ್ಷ ಕೋಟಿ (15 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಸಜ್ಜಾಗಿರುವುದು ನೆರೆ ರಾಜ್ಯಗಳಲ್ಲಿ ಸಂಚಲನ ಸೃಷ್ಟಿಸಿದೆ.
ಕರ್ನಾಟಕದ ಬಳಿಕ, ರಾಜಕಾರಣಿಗಳು ಇದೀಗ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಯನ್ನು ಕೆಣಕಲಾರಂಬಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹೂಡಿಕೆಯು ತಮಿಳುನಾಡಿನ ಕೈತಪ್ಪಿದ್ದು ಏಕೆ, ಆಂಧ್ರ ಪ್ರದೇಶದ ಪಾಲಾದದ್ದು ಹೇಗೆ ಪ್ರಶ್ನಿಸುತ್ತಿದ್ದಾರೆ.