Smart Village: ಮನೆ, ಮನೆಗೂ ಸೋಲಾರ್, ರಸ್ತೆಗಳು ಫುಲ್ ಕ್ಲೀನ್! ಆನಂದ್ ಮಹೀಂದ್ರಾ ಶೇರ್ ಮಾಡಿದ ಈ ಹಳ್ಳಿ ಯಾವುದು ಗೊತ್ತಾ
ಒಂದು ಹಳ್ಳಿ ಬದಲಾಗಬೇಕಾದರೆ ಕೋಟ್ಯಾಂತರ ರೂಪಾಯಿ ಹಣ ಬೇಕಿಲ್ಲ, ಒಳ್ಳೆಯ ನಾಯಕತ್ವ ಮತ್ತು ಜನರ ಸಹಕಾರವಿದ್ದರೆ ಸಾಕು ಎಂಬುದಕ್ಕೆ ಮಹಾರಾಷ್ಟ್ರದ 'ಸತಾರಾ ನೇವಾರ್' ಹಳ್ಳಿ ಒಂದು ಅದ್ಭುತ ಉದಾಹರಣೆ. ಈ ಹಳ್ಳಿಯಲ್ಲೀಗ ಬಿಸಿ ನೀರಿಗಾಗಿ ಸೋಲಾರ್ ಹೀಟರ್, ಕುಡಿಯಲು ಶುದ್ಧ ನೀರು ಮತ್ತು ಕಸವಿಲ್ಲದ ಸ್ವಚ್ಛ ರಸ್ತೆಗಳಿವೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಈ ಹಳ್ಳಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.