ಗೋವಾ ಅಗ್ನಿ ದುರಂತ: ನೈಟ್‌ಕ್ಲಬ್ ತೆರವುಗೊಳಿಸುವಂತೆ ಸಿಎಂ ಸಾವಂತ್ ಆದೇಶ
ಪಣಜಿ: 25 ಜನರನ್ನು ಬಲಿ ಪಡೆದ ಅಗ್ನಿ ದುರಂತದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಂಗಳವಾರ ಸಹೋದರರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಒಡೆತನದ ವಾಗೇಟರ್‌ನಲ್ಲಿರುವ ಅಕ್ರಮ 'ರೋಮಿಯೋ ಲೇನ್' ಬೀಚ್ ಶ್ಯಾಕ್ ನೈಟ್‌ಕ್ಲಬ್ ಅನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.