ಬೀದಿ ನಾಯಿ ದಾಳಿಗೆ ಈಡಾಗಿದ್ದು ಬರೋಬ್ಬರಿ 16,781 ಜನ, ಒಂದು ಸಾವೂ ಆಯ್ತು ಇಲ್ಲಿ! ಹಾಗಾದರೆ ಕ್ರಮಗಳೇನು
ಮೈಸೂರು: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು (Case) ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದ್ದು, ಈ ವರ್ಷದ ವರದಿ ಪ್ರಕಾರ ಒಟ್ಟು 16,781 ನಾಯಿ ಕಡಿತ (Dog Bite) ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಒಂದು ಮರಣ ಪ್ರಕರಣವೂ ದಾಖಲಾಗಿರುವುದು ಸಾರ್ವಜನಿಕರಲ್ಲಿ (Public) ಚಿಂತೆ ಉಂಟುಮಾಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಅವರು, ನಾಯಿ ಕಡಿತ ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು (Precaution) ಗಟ್ಟಿಗೊಳಿಸಲು ವಿವಿಧ ಇಲಾಖೆಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದರು.