ದಕ್ಷಿಣ ಭಾರತದ ಅತಿದೊಡ್ಡ ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಾಂಕ ನಿಗದಿ
ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗೆ ದಿನಾಂಕ ನಿಗದಿ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವವು ಫೆಬ್ರವರಿ 24 ರಿಂದ ಮಾರ್ಚ್ 4 ರ ವರೆಗೆ ನಡೆಯಲಿದೆ.
ಜಾತ್ರೆ ಸಂಬಂಧ ಇವತ್ತು ಸಾರ್ವಜನಿಕ ಸಭೆ ನಡೆಯಿತು. ಈ ಸಭೆಯಲ್ಲಿ ಜಾತ್ರಾ ದಿನಾಂಕ ಘೋಷಣೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಇದೆ. ದೇಶದ ನಾನಾ ಭಾಗಗಳಿಂದ ಜಾತ್ರೆಗೆ ಭಕ್ತರು ಬರುತ್ತಾರೆ.