ಕೋಗಿಲು ಕ್ರಾಸ್ ವಲಸಿಗರಿಗೆ ಪ್ಲ್ಯಾಟ್ ನೀಡಿಕೆಗೆ ದಾಖಲೆ ಪರಿಶೀಲನೆ: ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯ ಆಶ್ರಯ ಸಮಿತಿ ಸಭೆ ಬಾಕಿ
ಬೆಂಗಳೂರಿನ ಕೋಗಿಲು ಒತ್ತುವರಿ ತೆರವು ಪ್ರಕರಣದಲ್ಲಿ ವಲಸಿಗರ ದಾಖಲೆಗಳ ಪರಿಶೀಲನೆಯೂ ಇನ್ನೂ ಮೂರು ನಾಲ್ಕು ದಿನಗಳ ಕಾಲ ನಡೆಯಲಿದೆ. ಸೋಮವಾರದ ನಂತರವಷ್ಟೇ ಯಾರಾರಿಗೆ ಮನೆ ಕೊಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ. ಯಾವ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಗೊಂದಲ ಕೂಡ ಇದೆ. ಡಿಸಿ ನೇತೃತ್ವದಲ್ಲಿ ಇನ್ನೂ ದಾಖಲೆ ಪರಿಶೀಲನೆ ಮುಂದುವರಿಯುತ್ತಿದೆ.