ವೆನಿಜುವೆಲಾದಿಂದ ತೈಲ ಖರೀದಿಗೆ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಿಕ್ತು ಅಮೆರಿಕಾದ ಒಪ್ಪಿಗೆ; ಹೆಚ್ಚಲಿದೆ ಲಾಭ
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕಾದಿಂದ ವೆನೆಜುವೆಲಾದ ಕಚ್ಚಾ ತೈಲವನ್ನು ಆಮದು ಮಾಡಲು ಪರವಾನಿಗೆ ಪಡೆದಿದೆ. ವರದಿಗಳ ಪ್ರಕಾರ, ರಿಲಯನ್ಸ್ ಯಾವುದೇ ಮಧ್ಯವರ್ತಿಯಿಲ್ಲದೆ ನೇರವಾಗಿ ವೆನೆಜುವೇಲಾದಿಂದ ತೈಲ ಖರೀದಿಸಬಹುದು. ಈಗಾಗಲೇ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.
ಅಮೆರಿಕಾ-ಭಾರತ ಒಪ್ಪಂದದ ಬಳಿಕ ಈ ಪರವಾನಿಗೆಯ ವಿಷಯ ಬೆಳಕಿಗೆ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ ಎಂದು ಹೇಳಿದ್ದರು, ಈ ಘೋಷಣೆಯ ನಂತರ ರಿಲಯನ್ಸ್‌ಗೆ ಪರವಾನಿಗೆ ಸಿಕ್ಕಿದೆ ಎಂದು ವರದಿಗಳಲ್ಲಿ ತಿಳಿಯುತ್ತಿದೆ.
ರಿಲಯನ್ಸ್ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತದೆ. ವೆನೆಜುವೇಲಾದ ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಈ ಘಟಕ ಸುಲಭವಾಗಿ ಸಂಸ್ಕರಿಸಬಹುದಾಗಿದೆ. ಆರ್ಥಿಕ ತಜ್ಞರು, ಈ ನೇರ ಖರೀದಿ ರಿಲಯನ್ಸ್ ಲಾಭವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಂದಾಜಿಸುತ್ತಿದ್ದಾರೆ.
ಮೊದಲೇ ಹಲವು ತೈಲ ಕಂಪನಿಗಳು ಅಮೆರಿಕಾದ ಪರವಾನಿಗೆ ಕೇಳಿ ವೆನೆಜುವೇಲಾದಿಂದ ತೈಲ ಖರೀದಿಸಲು ಯತ್ನಿಸಿದ್ದರು.
2019ರಲ್ಲಿ ಅಮೆರಿಕಾ ವೆನೆಜುವೇಲಾದ ತೈಲ ರಫ್ತಿಗೆ ನಿರ್ಬಂಧ ವಿಧಿಸಿದ್ದರಿಂದ, ಹಲವಾರು ದೇಶಗಳು ತೈಲ ಖರೀದಿಯನ್ನು ನಿಲ್ಲಿಸಿದ್ದರು. ವೆನೆಜುವೇಲಾ OPEC ಸದಸ್ಯವಾಗಿದ್ದು, ವಿಶ್ವದ ಅತಿದೊಡ್ಡ ತೈಲ ನಿಕ್ಷೇಪ ಹೊಂದಿದೆ, ಆದರೆ ಜಾಗತಿಕ ಪೂರೈಕೆಯಲ್ಲಿ ಕೇವಲ 1% ಭಾಗವನ್ನು ನೀಡುತ್ತದೆ. ಇತ್ತೀಚೆಗೆ, ಅಮೆರಿಕಾ-ಭಾರತ ಒಪ್ಪಂದದ ಹಿನ್ನೆಲೆಯಲ್ಲಿ, ರಿಲಯನ್ಸ್ ಸೇರಿದಂತೆ ಕೆಲ ಕಂಪನಿಗಳಿಗೆ ನೇರವಾಗಿ ವೆನೆಜುವೇಲಾದಿಂದ ತೈಲ ಖರೀದಿಸಲು ಅವಕಾಶ ನೀಡಲಾಗಿದೆ.