Maha Shivaratri 2026: ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಸ್ವಾಗತವಿದೆ. ಕಾರ್ಯಕ್ರಮದ ವಿವರ ಇಲ್ಲಿದೆದಿ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ಶಿವರಾತ್ರಿಯ ಮಹೋತ್ಸವದ ಆಚರಣೆಯು ನಡೆಯಲಿದ್ದು, ವೈದಿಕ ಪೂಜೆಗಳು, ಭಜನೆಗಳು, ಧ್ಯಾನ ನಡೆಯಲಿದೆ. ವೈದಿಕ ಸಂಪ್ರದಾಯದಂತೆ ನಡೆಯಲಿರುವ ಮಹೋತ್ಸವದಲ್ಲಿ ಭಾರತಾದ್ಯಂತದಿಂದ ಮತ್ತು ವಿದೇಶಗಳಿಂದಲೂ ಭಕ್ತರು ಪಾಲ್ಗೊಳ್ಳಲಿದ್ದಾರೆ. ಗುರುದೇವ ಶ್ರೀ ಶ್ರೀ ರವಿ ಶಂಕರರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಮಹೋತ್ಸವವು ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಪುನಶ್ಚೇತನವನ್ನು ಪ್ರತಿಬಿಂಬಿಸಲಿದೆ.
ವೈದಿಕ ಪರಂಪರೆಯಲ್ಲೇ ಅತೀ ಪವಿತ್ರವಾದ ರಾತ್ರಿ ಎಂದು ಪರಿಗಣಿಸಲ್ಪಡುವ ಮಹಾಶಿವರಾತ್ರಿಯು ಆಳವಾದ ವಿಶ್ರಾಂತಿಯನ್ನು, ಅರಿವಿನ ಉನ್ನತ ಸ್ಥಿತಿಯನ್ನು ಮತ್ತು ಆಂತರಿಕ ಪರಿವರ್ತನೆಯನ್ನು ತರುವ ಅತ್ಯಂತ ಪ್ರಬಲ ಅವಕಾಶ. ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ಆಚರಿಸಲಾಗುವ ಈ ಮಹೋತ್ಸವವು ವೈದಿಕ ಆಚರಣೆಗಳು ಮತ್ತು ಹೃದಯಸ್ಪರ್ಶಿಯಾದ ಸುಮಧುರ ಸಂಗೀತದಿಂದ ಉಂಟಾಗುವ ಚೈತನ್ಯಮಯ ವಾತಾವರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಇದು ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ಅನುರಣಿಸುತ್ತದೆ.
ಕಾರ್ಯಕ್ರಮದ ವಿವರಗಳು:
ಸಂಜೆ 7:15 - 7:45 - ಭಜನೆಗಳು
ಸಂಜೆ 7:45 - 9:30 - ಮಹಾ ರುದ್ರ ಪೂಜೆ
ರಾತ್ರಿ 9:30 - 10:30 - ಭಜನೆಗಳು ಮತ್ತು ಗುರುದೇವರ ಪ್ರವಚನ
ರಾತ್ರಿ 11:30ಕ್ಕೆ - ಗುರುದೇವರೊಂದಿಗೆ ವಿಶೇಷವಾದ ಮಧ್ಯರಾತ್ರಿಯ ಧ್ಯಾನ
ಬೆಳಿಗ್ಗೆ 4:00 ಗಂಟೆಯಿಂದ - ಮಹಾ ರುದ್ರ ಹೋಮ
ಭಾರತದ 150 ಸ್ಥಳಗಳಲ್ಲಿ ಲಕ್ಷಾಂತರ ಜನರು ತಮ್ಮ ನಗರಗಳಲ್ಲಿಯೇ ರುದ್ರಪೂಜೆಯಲ್ಲಿ ಭಾಗವಹಿಸಿ, ಅದರ ಆಧ್ಯಾತ್ಮಿಕ ತರಂಗಗಳನ್ನು ಅನುಭವಿಸುವ ವಿಶೇಷ ಅವಕಾಶ.
ಜಗತ್ತಿನಾದ್ಯಂತದ ಲಕ್ಷಾಂತರ ಸಾಧಕರ ಉಪಸ್ಥಿತಿಯಲ್ಲಿ ನಡೆಯಲಿರುವ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ಮಹಾಶಿವರಾತ್ರಿ ಆಚರಣೆಯು, ಗಹನತೆಯೊಂದಿಗೆ ಸಂಭ್ರಮವನ್ನು ಮಿಶ್ರಣಗೊಳಿಸಿದ, ಪ್ರಬಲವಾದ ಸಕಾರಾತ್ಮಕ ಕ್ಷೇತ್ರವನ್ನು ನಿರ್ಮಿಸಲು ಸಜ್ಜಾಗಿದೆ.
R