Buzz: ಶಂಕರ್ ಡ್ರೀಮ್ ಪ್ರಾಜೆಕ್ಟ್ ʼವೇಲ್ಪಾರಿʼಯಲ್ಲಿ ಕಾಲಿವುಡ್ ಸ್ಟಾರ್ ಧನುಷ್?
ಸೌತ್ ಚಿತ್ರರಂಗದ ದಿಗ್ಗಜ ನಿರ್ದೇಶಕ ಶಂಕರ್ (Director Shankar) ಅವರ ಡ್ರೀಮ್ ʼವೇಲ್ಪಾರಿ' ಪ್ರಾಜೆಕ್ಟ್ (Velpari Movie) ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಂಕರ್, ʼಇಂಡಿಯನ್ 2ʼ, ʼಗೇಮ್ ಚೇಂಜರ್ʼ ಮೂಲಕ ನಿರೀಕ್ಷಿತ ಮಟ್ಟಗಿನ ಯಶಸ್ಸು ಕಂಡಿಲ್ಲ. ಹೀಗಾಗಿ ಶಂಕರ್ ಸ್ವಲ್ಪ ಸಮಯ ತೆಗೆದುಕೊಂಡು ತಮ್ಮ ಡ್ರೀಮ್ ಪ್ರಾಜೆಕ್ಟ್‌ನತ್ತ ಗಮನ ಹರಿಸಿದ್ದಾರೆ.
ʼವೇಲ್ಪಾರಿʼಯಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ (Ranveer Singh) ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರ ಜತೆ ವಿಕ್ರಮ್ (Chiyaan Vikram) ಅವರ ಹೆಸರು ಕೂಡ ಈ ಪ್ರಾಜೆಕ್ಟ್‌ನಲ್ಲಿ ಕೇಳಿ ಬರುತ್ತಿದೆ.
ಅಧಿಕೃತವಾಗಿ ಈ ಕುರಿತು ಮಾಹಿತಿ ಹೊರಬೀಳಬೇಕಿದೆ. ಈ ನಡುವೆಯೇ ಚಿತ್ರದ ಬಗ್ಗೆ ಮತ್ತೊಂದು ಗಾಸಿಪ್ ಹರಿದಾಡಿದೆ. ಕಾಲಿವುಡ್ ಸ್ಟಾರ್ ಧನುಷ್ (Dhanush) ಅವರು ʼವೇಲ್ಪಾರಿʼಯಲ್ಲಿ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಶಂಕರ್ ಧನುಷ್ ಅವರ ʼಡಿ55ʼ ಚಿತ್ರ ಮುಹೂರ್ತದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಧನುಷ್ ಅವರ ಲಭ್ಯತೆ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಬರುವ ಸಾಧ್ಯತೆಯಿದೆ.
ಸು. ವೆಂಕಟೇಶನ್ ಅವರ ʼವೀರ ಯುಗ ವೇಲ್ಪಾರಿʼ ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿರಲಿದೆ. ಮುಳ್ಳೈ ನಾಡಿನ ಕರುಣಾಮಯಿ ಹಾಗೂ ದಾನಶೀಲ ರಾಜ ಪಾರಿಯ ವೀರಗಾಥೆಯನ್ನು ಈ ಚಿತ್ರ ಒಳಗೊಂಡಿದ್ದು, ಚೇರ, ಚೋಳ ಮತ್ತು ಪಾಂಡ್ಯರ ವಿರುದ್ಧದ ಯುದ್ಧಗಳನ್ನು ಚಿತ್ರಿಸುತ್ತದೆ ಎನ್ನಲಾಗಿದೆ.