... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ:

ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ: ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಗೆ ಒಲಿದ ಡಿಸಿ ಭಾಗ್ಯ

ಅಧಿಕಾರಿಗಳ ವರ್ಗಾವಣೆಯಲ್ಲೇ ರಾಜ್ಯ ಸರ್ಕಾರ ಹಣ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿಕೊಂಡುತ್ತಿವೆ. ಈ ನಡುವೆ ಒಂದು ವರ್ಷ ಎರಡು ತಿಂಗಳಿಗೆ ಜಿಲ್ಲಾಧಿಕಾರಿಯನ್ನ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಯನ್ನು ತಂದು ಕೂರಿಸಲಾಗಿದೆ. ಈ ಈ ಹಿನ್ನೆಲೆಯಲ್ಲಿ ಸರ್ಕಾರ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಸಿಟಿ ಔಟ್ ಸ್ಕಟ್ಸ್ ನಲ್ಲಿ ಕೆಂಪೇಗೌಡ ಏರ್ಪೋಟ್ ನಿಂದ ಪ್ರಸಿದ್ದಿಯಾಗಿರುವ ಪ್ಯೂಚರ್ ಬೆಂಗಳೂರು (Bengaluru) ಅಂತಲೆ ಕರೆಸಿಕೊಳ್ಳುವ ಜಿಲ್ಲೆ. ಹೀಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ತುದ್ದಿಗಾಲಲ್ಲಿ ನಿಲ್ಲುತ್ತಿದ್ದು, ಡಿಮ್ಯಾಂಡ್ ಸಹ ಹಚ್ಚಿದೆ. 

ಇಷ್ಟು ಡಿಮ್ಯಾಂಡ್ ನಡುವೆಯೂ ಸಿಇಒ ಆಗಿ ಎರೆಡೂವರೆ ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಅನುರಾಧ ಕೆ ಎನ್ ಡಿಸಿಯಾಗಿ ಮುಂಬಡ್ತಿ ಪಡೆದಿದ್ದರೆ, ಬಂದ ಒಂದು ವರ್ಷಕ್ಕೆ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅಚ್ಚರಿ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಈ ಜಾಗಕ್ಕೆ ಇದೀಗ ಸಚಿವ ಆಪ್ತ ಕಾರ್ಯದರ್ಶಿ ಸಿಇಒ ಆಗಿದ್ದ ಅನುರಾಧ ಅವರನ್ನೇ ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಹೌದು..ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಒ ಆಗಿ ಕಳೆದ ಎರಡೂವರೆ ವರ್ಷದಿಂದೆ ಕೆ ಎನ್ ಅನುರಾಧ ಅವರು ಅಧಿಕಾರ ವಹಿಸಿಕೊಂಡಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಡಿಸಿಯಾಗಿ ಎ ಬಿ ಬಸವರಾಜ್ ಬಂದಿದ್ದರು. 

ಡಿಸಿ ಮತ್ತು ಸಿಇಒ ಇಬ್ಬರು ಜಿಲ್ಲೆಯಲ್ಲಿ ಆಕ್ಟೀವ್ ಆಗಿ ಓಡಾಡಿಕೊಂಡು ಕೆಲಸ ಮಾಡುತ್ತಾ ಜನಮನ್ನಣೆ ಗಳಿಸಿದ್ದರು. ಆದ್ರೆ ಇದೀಗ ಡಿಸಿಯಾಗಿ ಬಂದ ಒಂದು ವರ್ಷಕ್ಕೆ ಬಸವರಾಜ್ ಅವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಳೆದ ಎರೆಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಇಒ ಅನುರಾಧ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯತಿಯ ಪ್ರಭಾರ ಸಿಇಒ ಆಗಿಯೂ ಅನುರಾಧ ಅವರನ್ನೇ ಮುಂದುವರೆಸಲಾಗಿದೆ. ಅನುರಾಧ ಅವರು ಸಚಿವ ಕೆ.ಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿಯಾಗಿದ್ದಾರೆ. ಹೀಗಾಗಿ ಅವರಿಗೆ ಈ ಭಾಗ್ಯ ದೊರೆತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ. 

 ಇದನ್ನೂ ನೋಡಿ: ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು ಒಂದೇ ವರ್ಷಕ್ಕೆ ಅದು ಸ್ಥಳ ತೋರಿಸದೇ ವರ್ಗಾವಣೆ ಮಾಡಿರುವುದಕ್ಕೆ ಬಸವರಾಜ್ ಶಾಕ್ ಆಗಿದ್ದಾರೆ. ಜೊತೆಗೆ ನೂತನ ಡಿಸಿಯಾಗಿ ನೇಮಕ ಜೊತೆಗೆ ಜಿಲ್ಲಾ ಪಂಚಾಯತಿ ಸಿಇಒ ಆಗಿಯೂ ಅನುರಾಧ ಅವರನ್ನ ಮುಂದುವರೆಸಿರುವುದು ಅಚ್ಚರಿಯಾಗಿದೆ. ನೂತನ ಡಿಸಿ ಕೆ ಎನ್ ಅನುರಾಧ ಅವರು ಸಚಿವ ಕೆಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿ ಎನ್ನುವ ಕಾರಣಕ್ಕೆ ಎರೆಡೂವರೆ ವರ್ಷದಿಂದ ಜಿಲ್ಲೆಯಲ್ಲೆ ಉನ್ನತ ಸ್ಥಾನದಲ್ಲಿ ಮುಂದುವರೆಸಿದ್ದು, ಇದೀಗ ಡಿಸಿಯಾಗಿ ಬಡ್ತಿ ಸಹ ನೀಡಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿವೆ. ಇನ್ನೂ ಜಿಲ್ಲೆಯಲ್ಲಿ ಈಗಾಗಲೇ ಸಚಿವರ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಉನ್ನತ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದಾರೆ. ಅನ್ನೋ ಆರೋಪ ಸಹ ಕೇಳಿ ಬರ್ತಿದ್ದು, ಇದೀಗ ಡಿಸಿಯನ್ನ ದಿಢೀರ್ ವರ್ಗಾವಣೆ ಪಿಎಸ್​ ಪತ್ನಿಯನ್ನ ಜಿಲ್ಲಾಧಿಕಾರಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.

Source : TV9 Kannada

2 hours ago

Home Flash News