... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಭಾರತೀಯ ನೌಕಾಪಡೆಗೆ 'ಐಎನ್‌ಎಸ್ ಅಂಜದೀಪ್' ಸೇರ್ಪಡೆ: 2035ರ ವೇಳೆಗೆ 200 ಯುದ್ಧನೌಕೆಗಳ ಗುರಿ!

ಭಾರತೀಯ ನೌಕಾಪಡೆಗೆ 'ಐಎನ್‌ಎಸ್ ಅಂಜದೀಪ್' ಸೇರ್ಪಡೆ: 2035ರ ವೇಳೆಗೆ 200 ಯುದ್ಧನೌಕೆಗಳ ಗುರಿ!

ಭಾರತೀಯ ನೌಕಾಪಡೆಯನ್ನು ಜಾಗತಿಕ ಮಟ್ಟದ ಬಲಿಷ್ಠ ಶಕ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. 2035ರ ವೇಳೆಗೆ ನೌಕಾಪಡೆಯು 200ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಹೊಂದಿರುವ ಗುರಿಯನ್ನು ಹೊಂದಿದ್ದು, 2026ರಲ್ಲಿಯೇ 15 ಹೊಸ ನೌಕೆಗಳು ಸೇನೆಗೆ ಸೇರ್ಪಡೆಯಾಗಲಿವೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ತಿಳಿಸಿದ್ದಾರೆ. ಶುಕ್ರವಾರ ಚೆನ್ನೈ ಬಂದರಿನಲ್ಲಿ ನಡೆದ ಸಮಾರಂಭದಲ್ಲಿ 'ಐಎನ್‌ಎಸ್ ಅಂಜದೀಪ್' (INS Anjadip) ಯುದ್ಧನೌಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು 2025ರಲ್ಲಿ 12 ಯುದ್ಧನೌಕೆಗಳು ಮತ್ತು ಒಂದು ಜಲಂತರಗಾಮಿ ನೌಕಾಪಡೆಗೆ ಸೇರ್ಪಡೆಯಾಗಿದ್ದು, 2026ರಲ್ಲಿ ಇನ್ನೂ 15 ನೌಕೆಗಳು ಸೇರ್ಪಡೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದರು.

 ಸದ್ಯ ನಿರ್ಮಾಣ ಹಂತದಲ್ಲಿರುವ ಎಲ್ಲಾ 50 ಯುದ್ಧನೌಕೆಗಳು ಭಾರತದ ಶಿಪ್‌ಯಾರ್ಡ್‌ಗಳಲ್ಲೇ ತಯಾರಾಗುತ್ತಿವೆ. 2047ರ ವೇಳೆಗೆ ನೌಕಾಪಡೆಯ ಬಿಡಿಭಾಗಗಳ ಮಟ್ಟದಲ್ಲೂ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. -ಶಕ್ತಿಶಾಲಿ ಆಯುಧಗಳು: ಇದು ಅತ್ಯಾಧುನಿಕ ಸೋನಾರ್‌ಗಳು, ಹಗುರವಾದ ಟಾರ್ಪಿಡೊಗಳು ಮತ್ತು ಆಂಟಿ-ಸಬ್‌ಮರೀನ್ ರಾಕೆಟ್‌ಗಳನ್ನು ಹೊಂದಿದೆ. -ಮುಖ್ಯವಾಗಿ ಪೂರ್ವ ವಲಯದ ಕರಾವಳಿ ಮತ್ತು ಸಮುದ್ರ ತೀರದ ಭದ್ರತೆಯನ್ನು ಇದು ಬಲಪಡಿಸಲಿದೆ. ರಾಷ್ಟ್ರೀಯ ಏಕತೆಯ ಸಂಕೇತ ಈ ನೌಕೆಯನ್ನು ದಕ್ಷಿಣದ ಎಲ್ ಅಂಡ್ ಟಿ ಶಿಪ್‌ಯಾರ್ಡ್‌ನಲ್ಲಿ ಕೋಲ್ಕತ್ತಾದ ಜಿಆರ್‌ಎಸ್‌ಇ ತಂಡ ನಿರ್ಮಿಸಿದೆ. ಇದರ ಯುದ್ಧ ನಿರ್ವಹಣಾ ವ್ಯವಸ್ಥೆಯು ಉತ್ತರ ಭಾರತದ ಘಾಜಿಯಾಬಾದ್‌ನಲ್ಲಿ ವಿನ್ಯಾಸಗೊಂಡಿದ್ದು, ಪಶ್ಚಿಮದ ಅಂಜದೀಪ್ ದ್ವೀಪದ ಹೆಸರನ್ನು ಇದಕ್ಕೆ ಇಡಲಾಗಿದೆ. ಇದು ಅಕ್ಷರಶಃ ಇಡೀ ಭಾರತ ಒಂದಾಗಿ ನಿರ್ಮಿಸಿದ ಹೆಮ್ಮೆಯ ನೌಕೆಯಾಗಿದೆ.

Source : Udayavani

2 hours ago

Home Flash News