... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
Vijay Thalapathy: ವಿಜಯ್ ದಳಪತಿ ಬಾಳಲ್ಲಿ ಬಿರುಗಾಳಿ!

Vijay Thalapathy: ವಿಜಯ್ ದಳಪತಿ ಬಾಳಲ್ಲಿ ಬಿರುಗಾಳಿ! ವಿಚ್ಛೇದನಕ್ಕೆ ಪತ್ನಿ ಸಂಗೀತಾ ಅರ್ಜಿ! 'ಜನನಾಯಗನ್' ಬಾಳಲ್ಲಿ ಏನಾಯ್ತು?

Vijay Thalapathy: ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈ: ನಟ ವಿಜಯ್ ದಳಪತಿಗೆ (Vijay Thalapathi) ಮತ್ತೊಂದು ಶಾಕ್ ಎದುರಾಗಿದೆ. ಒಂದೆಡೆ ಜನನಾಯಗನ್ (Jananayagan) ಸಿನಿಮಾಕ್ಕೆ ಶಾಕ್ ಎದುರಾಗಿತ್ತು. ಆದರೆ ಇದರ ಬೆನ್ನಲ್ಲೇ ವಿಜಯ್‌ಗೆ ಪತ್ನಿ ಸಂಗೀತಾ (Sangeetha) ಶಾಕ್ ಕೊಟ್ಟಿದ್ದಾರೆ. ತಮಿಳು ವೆಟ್ರಿ ಕಲಗಮ್ (TVK - Tamilaga Vettri Kazhagam) ಮುಖ್ಯಸ್ಥರೂ ಆಗಿರುವ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ (Divorce) ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಂಗೀತಾ ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದು, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಡಿವೋರ್ಸ್‌ಗೆ ವಿಜಯ್ ಪತ್ನಿ ಅರ್ಜಿ ತಮಿಳಿಗ ವೆಟ್ರಿ ಕಲಗಮ್ ಪಕ್ಷದ ನಾಯಕ ವಿಜಯ್ ಅವರ ಪತ್ನಿ ಸಂಗೀತಾ ಡಿವೋರ್ಸ್‌ಗಾಗಿ ಕೋರ್ಟ್ ಮೆಲ್ಲಿಲೇರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಭಿಮಾನಿಯನ್ನೇ ಮದುವೆಯಾಗಿದ್ದ ವಿಜಯ್ ಸಂಗೀತಾ ಲಂಡನ್ ಮೂಲದ ತಮಿಳು ಮಹಿಳೆ. ಮೂಲತಃ ಶ್ರೀಲಂಕಾದವರಾದ, ಲಂಡನ್‌ನಲ್ಲಿ ನೆಲೆಸಿದ್ದರು. ಅವರು ವಿಜಯ್ ಅವರ ಅಪಾರ ಅಭಿಮಾನಿಯಾಗಿದ್ದರು ಮತ್ತು ನಂತರ ಅವರ ಜೀವನ ಸಂಗಾತಿಯಾದರು. ಅವರ ಪ್ರೀತಿ ಮತ್ತು ವೈವಾಹಿಕ ಜೀವನವು ಸಿನಿಮೀಯ ಕಥೆಯಷ್ಟೇ ಆಸಕ್ತಿದಾಯಕವಾಗಿತ್ತು. ಸಂಗೀತಾ ಲಂಡನ್‌ನಲ್ಲಿ ಹುಟ್ಟಿ ಬೆಳೆದರು. ಅವರ ತಂದೆ ಸೊನ್ನಲಿಂಗಂ ಲಂಡನ್‌ನಲ್ಲಿ ದೊಡ್ಡ ಉದ್ಯಮಿಯಾಗಿದ್ದರು. 1996 ರಲ್ಲಿ, 'ಪೂವೆ ಉನಕ್ಕ' ಚಿತ್ರವು ಭಾರಿ ಯಶಸ್ಸನ್ನು ಕಂಡಿತು.

 ಆ ಸಮಯದಲ್ಲಿ, ಸಂಗೀತಾ ವಿಜಯ್ ಅವರನ್ನು ಮೆಚ್ಚಿಸಲು ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ಸಂಗೀತಾ ಸೆಟ್‌ನಲ್ಲಿ ವಿಜಯ್ ಅವರನ್ನು ಭೇಟಿಯಾಗಿ ತನ್ನನ್ನು ಅಭಿಮಾನಿ ಎಂದು ಪರಿಚಯಿಸಿಕೊಂಡರು. ಸಂಗೀತಾಳ ಪ್ರೀತಿಗೆ ವಿಜಯ್ ಮನಸೋತರು. ಇವರಿಬ್ಬರ ಪ್ರೀತಿಗೆ ಎರಡೂ ಮನೆಯಲ್ಲಿ ಪೋಷಕರು ಒಪ್ಪಿದರು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ವಿಜಯ್ ಹಾಗೂ ಸಂಗೀತಾ ಅವರು ಆಗಸ್ಟ್ 25, 1999 ರಂದು ವಿವಾಹವಾದರು. ಅವರ ವಿವಾಹವನ್ನು ಹಿಂದೂ ಮತ್ತು ಕ್ರಿಶ್ಚಿಯನ್ ವಿಧಿವಿಧಾನಗಳ ಪ್ರಕಾರ ಅದ್ಧೂರಿಯಾಗಿ ಆಚರಿಸಲಾಯಿತು. ವಿಜಯ್, ಸಂಗೀತಾ ದಂಪತಿಗೆ ಇಬ್ಬರು ಮಕ್ಕಳು ವಿಜಯ್, ಸಂಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಸಂಜಯ್ ಕೆನಡಾದಲ್ಲಿ ಚಲನಚಿತ್ರ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ಪ್ರಸ್ತುತ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅದೇ ರೀತಿ, ಮಗಳು ದಿವ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

Source : News18 Kannada

2 hours ago

Home Flash News