IND vs WI: ಭಾರತ ಅಥವಾ ವೆಸ್ಟ್ ಇಂಡೀಸ್? ಸೆಮಿ ಫೈನಲ್ಗೆ ಎಂಟ್ರಿ ಕೊಟ್ಟರೆ ಏನಾಗುತ್ತೆ? ಶಾಕಿಂಗ್ ಲೆಕ್ಕಾಚಾರ!
India vs West Indies: ಟೀಂ ಇಂಡಿಯಾ 2026ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಅವಕಾಸ ಪಡೆದುಕೊಳ್ಳಲು ಸೂರ್ಯ ಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಭಾನುವಾರ ಕೋಲ್ಕತ್ತಾ ಈಡನ್ ಗಾರ್ಡನ್ಸ್ ನಲ್ಲಿ ವೆಸ್ಟ್ ಇಂಡೀಸ್ ಸೂಪರ್ 08 ಮ್ಯಾಚ್ ಆಡಲಿದೆ. ಈ ಪಂದ್ಯವನ್ನು ವರ್ಚುವಲ್ ಕ್ವಾಟರ್ ಫೈನಲ್ ಎಂದು ಪರಿಗಣಿಸಲಾಗುತ್ತಿದೆ. ಗೆಲುವು ಪಡೆದ ತಂಡದ ಟಾಪ್-04ಗೆ ಪ್ರವೇಶಿಸಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಸದ್ಯ ತಲಾ ಎರಡು ಅಂಕ ಪಡೆದುಕೊಂಡಿದೆ. ಆದರೆ ಉತ್ತಮ ರನ್ ರೇಟ್ ಕಾರಣದಿಂದ ವೆಸ್ಟ್ ಇಂಡೀಸ್ ಮುನ್ನಡೆ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಭಾರೀ ಸೋಲಿನ ಬಳಿಕ ಭಾರತ, ಜಿಂಬಾಬ್ವೆ ವಿರುದ್ಧ ಗೆದ್ದು ಫಾರ್ಮ್ಗೆ ಆಗಮಿಸಿದೆ. ಆದರೆ ರನ್ ರೇಟ್ ಕಾರಣದಿಂದ ವೆಸ್ಟ್ ಇಂಡೀಸ್ ಅಂಕಪಟ್ಟಿಯಲ್ಲಿ ಮುಂದಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ಜಿಂಬಾಬ್ವೆ ವಿರುದ್ಧ ಗೆದ್ದಿತು ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನ್ನು ಅನುಭವಿಸಿತು.
ಮಳೆಗೆ ಪಂದ್ಯ ರದ್ದಾದರೆ ಏನಾಗುತ್ತೆ?: ಈ ಪಂದ್ಯದಲ್ಲಿ ಗೆಲುವು ಪಡೆದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಖಾಯಂ ಆಗುತ್ತೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಪರಿಸ್ಥಿತಿ ಕಷ್ಟ ಆಗುತ್ತದೆ. ಮ್ಯಾಚ್ ನೋ ರಿಸಲ್ಟ್ ಆಗಿ ಮುಕ್ತಾಯವಾದರೆ, ಎರಡೂ ತಂಡಕ್ಕೆ ಒಂದೊಂದು ಪಾಯಿಂಟ್ ಸಿಗುತ್ತದೆ. ಆಗ ವೆಸ್ಟ್ ಇಂಡೀಸ್ ಮೂರು ಅಂಕಗಳೊಂದಿಗೆ ಸೆಮಿ ಫೈನಲ್ಗೆ ಸೇರ್ಪಡೆಯಾಗಲಿದೆ. ಭಾರತ ತಂಡ ಟೂರ್ನಿಯಿಂದ ವಾಪಸ್ ಆಗಲಿದೆ. ಇದರೊಂದಿಗೆ ಭಾರತಕ್ಕೆ ಮಳೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಸೂಪರ್ 08 ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಎದುರಾಗಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲುಂಡರೇ, ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ಗೆಲುವಿನ ತಂಡ ಗ್ರೂಪ್ ಟಾಪರ್ ಆಗೋ ಅವಕಾಸವೂ ಇದೆ. ಇದೇ ಆದರೆ ಗ್ರೂಪ್ ಟಾಪರ್ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಗ್ರೂಪ್ ರನ್ನರ್ ಅಪ್ ತಂಡವೂ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.