... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್‌ ಮೇಲಿನ ದಾಳಿಗೆ ಅಮೆರಿಕ ಮಾಡಿದ ಖರ್ಚು,

ಇರಾನ್‌ ಮೇಲಿನ ದಾಳಿಗೆ ಅಮೆರಿಕ ಮಾಡಿದ ಖರ್ಚು, ಬಳಸಿದ ಅಸ್ತ್ರಗಳ ಮಾಹಿತಿ ಇಲ್ಲಿದೆ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸಾರಿರುವ ಯುದ್ಧ ಇನ್ನಷ್ಟು ಉದ್ವಿಗ್ನವಾಗುವತ್ತ ಸಾಗುತ್ತಿದೆ. ಇನ್ನೂ ಕೆಲ ವಾರಗಳ ಕಾಲ ಇದು ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಪ್ರತೀಕಾರದ ಶಪಥ ಮಾಡಿದೆ. ಅಮೆರಿಕದ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪೋಸ್ಟ್ ಮಾಡಿದ್ದಾರೆ.

 ಇದರಿಂದಾಗಿ ಮಂಗಳವಾರವೂ ಯುದ್ಧ ಮುಂದುವರಿದಿದ್ದು, ಇರಾನ್‌ನ ಕ್ಷಿಪಣಿಯು ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಿದೆ. ಇದು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯೂ ಇದೆ. ಪರಮಾಣ ಅಸ್ತ್ರವನ್ನು ಇರಾನ್ ಪಡೆಯಬಾರದು ಎಂಬ ಕಾರಣದಿಂದ ಅಮೆರಿಕ ದಾಳಿ ಮಾಡಿರುವುದಾಗಿ ಹೇಳಿದೆ. ಈ ಕುರಿತು ಫೆ. 28ರಂದು ಡೊನಾಲ್ಡ್ ಟ್ರಂಪ್ ಅವರು 8 ನಿಮಿಷಗಳ ವಿಡಿಯೊ ಪೋಸ್ಟ್ ಅನ್ನು ಟ್ರುಥ್‌ ಸೋಷಿಯಲ್‌ನಲ್ಲಿ ಹಂಚಿಕೊಂಡಿದ್ದರು. ಇರಾನ್‌ ಒಳಗೆ ಪ್ರಬಲ ಶಸ್ತ್ರಸಜ್ಜಿತ ಯುದ್ಧ ನಡೆಸುವುದಾಗಿಯೂ ಹೇಳಿದ್ದರು. ಈ ಯುದ್ಧಕ್ಕೆ ‘ಆಪರೇಷನ್‌ ಎಪಿಕ್ ಫ್ಯೂರಿ’ ಎಂದು ಅವರು ಹೆಸರಿಸಿದ್ದರು. 

ಅದರಂತೆಯೇ ಅಮೆರಿಕ ಸೇನೆಯು ಇರಾನ್‌ನ 1,250 ಸ್ಥಳಗಳನ್ನು ಗುರಿಯಾಗಿಸಿ ಶನಿವಾರ ದಾಳಿ ನಡೆಸಿತ್ತು. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್, ಇರಾನ್‌ನ 11 ನೌಕೆಗಳನ್ನು ನಾಶಪಡಿಸಿರುವುದಾಗಿ ಹೇಳಿದೆ. ಇಸ್ರೇಲ್ ಹಾಗೂ ಅಮೆರಿಕ ಸೇನೆ ನಡೆಸುತ್ತಿರುವ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ 1989ರಿಂದ ಇರಾನ್‌ನ ಚುಕ್ಕಾಣಿ ಹಿಡಿದಿದ್ದ ಸರ್ವೋಚ್ಛ ನಾಯಕ ಅಯೋತೊಲ್ಲಾ ಅಲಿ ಖಮೇನಿ ಹಾಗೂ ಇತರ ಅಧಿಕಾರಿಗಳನ್ನು ಟೆಹ್ರಾನ್‌ನ ಆವರಣವೊಂದರಲ್ಲಿ ಹತ್ಯೆ ಮಾಡಿರುವುದಾಗಿ ಸೇನೆ ಹೇಳಿಕೊಂಡಿದೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಯುದ್ಧ ನಡೆಸಲು ಅಮೆರಿಕ ಸಿದ್ಧ ಎಂದು ಟ್ರಂಪ್ ಸೋಮವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ದಾಳಿ ಆರಂಭವಾದಾಗಿನಿಂದ ಈದಿನದವರೆಗೂ ದೇಶದ 131 ನಗರಗಳಲ್ಲಿ 555 ಜನ ಮೃತಪಟ್ಟಿರುವುದಾಗಿ ಇರಾನ್‌ನ ರೆಡ್‌ ಕ್ರೆಸೆಂಟ್ ಸಂಸ್ಥೆ ಹೇಳಿದೆ.

Source : Prajavani

1 hour ago

Home Flash News