ಸೆಮಿಫೈನಲ್‌ಗೂ ಮುನ್ನ ಸಂಜು ಸ್ಯಾಮ್ಸನ್ಗೆ ಬ್ಯಾನ್ ಭೀತಿ!
T20 World Cup 2026 Semi Final: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯವು ಮಾರ್ಚ್ 4 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ಜರುಗಲಿರುವ ದ್ವಿತೀಯ ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕಣಕ್ಕಿಳಿಯಲಿವೆ. T20 World Cup 2026: ಟಿ20 ವಿಶ್ವಕಪ್ನ 52ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜು ಸ್ಯಾಮ್ಸನ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಿಷೇಧಕ್ಕೆ ಒಳಗಾಗಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಐಸಿಸಿ ನಿಯಮದ ಉಲ್ಲಂಘನೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಿದ ನಂತರ, ಸಂಜು ಸ್ಯಾಮ್ಸನ್ ಉತ್ಸಾಹದಲ್ಲಿ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದಿದ್ದರು.
ಈ ಸಂಭ್ರಮವೇ ಈಗ ಸ್ಯಾಮ್ಸನ್ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ. ಏಕೆಂದರೆ ಐಪಿಎ ನೀತಿ ಸಂಹಿತೆಯ ಅಡಿಯಲ್ಲಿ ಆಟಗಾರನು ಯಾವುದೇ ವಸ್ತುವನ್ನು ಮೈದಾನದಲ್ಲಿ ಎಸೆದರೆ ಅದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ.
ಐಸಿಸಿ ನಿಯಮ:
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಪ್ರಕಾರ, ಕ್ರಿಕೆಟ್ ಸಲಕರಣೆಗಳನ್ನು (ಬ್ಯಾಟ್, ಹೆಲ್ಮೆಟ್ ಅಥವಾ ವಿಕೆಟ್) ದುರುಪಯೋಗಪಡಿಸಿಕೊಳ್ಳುವುದು ಅಥವಾ ಗೌರವವಿಲ್ಲದಂತೆ ನಡೆದುಕೊಳ್ಳುವುದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದು ಸಾಮಾನ್ಯವಾಗಿ ಲೆವೆಲ್ 1 ಉಲ್ಲಂಘನೆಯಾಗಿರುತ್ತದೆ. ಇದಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 50 ರಷ್ಟು ದಂಡ ಅಥವಾ ಅಧಿಕೃತ ಎಚ್ಚರಿಕೆಯ ಜೊತೆಗೆ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಬಹುದು.
ನಿಷೇಧಕ್ಕೆ ಒಳಗಾಗಲಿದ್ದಾರಾ?
ಸಂಜು ಸ್ಯಾಮ್ಸನ್ ಅವರ ಈ ವರ್ತನೆಯು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಮ್ಯಾಚ್ ರೆಫರಿ ಭಾವಿಸಿದರೆ, ಸೆಮಿಫೈನಲ್‌ಗೂ ಮುನ್ನ ಅವರ ವಿರುದ್ಧ ದಂಡ ವಿಧಿಸುವ ಸಾಧ್ಯತೆಯಿದೆ.
ಆದರೆ, ಇದು ಅವರ ಮೊದಲ ಉಲ್ಲಂಘನೆಯಾಗಿದ್ದರೆ ಪಂದ್ಯದಿಂದ ನಿಷೇಧ ಹೇರುವ ಸಾಧ್ಯತೆ ತೀರಾ ಕಡಿಮೆ.
ಒಂದು ವೇಳೆ ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಇದೇ ಮಾದರಿಯ ಯಾವುದೇ ತಪ್ಪು ಮಾಡಿದ್ದರೆ ಮಾತ್ರ ಅವರನ್ನು ಸೆಮಿಫೈನಲ್ ಪಂದ್ಯದಿಂದ ನಿಷೇಧಕ್ಕೆ ಒಳಪಡಿಸಲಾಗುತ್ತದೆ. ಇಲ್ಲದಿದ್ದರೆ ಮ್ಯಾಚ್ ರೆಫರಿ ಕೇವಲ ಎಚ್ಚರಿಕೆ ನೀಡಬಹುದು ಇಲ್ಲಾ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸುವ ಸಾಧ್ಯತೆಯಿದೆ.
ಸೆಮಿಫೈನಲ್ ಪಂದ್ಯ ಯಾವಾಗ?
ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿದೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ. ಅತ್ತ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾ್ಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: ಹೀಗಾದ್ರೆ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಫೈನಲ್!
ಈ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಜಯಗಳಿಸುವ ತಂಡಗಳು ಮಾರ್ಚ್ 8 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.