... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇಂದು ಇರಾನ್ ಮೇಲೆ ತೀವ್ರ ದಾಳಿ ಮಾಡ್ತೇವೆ:

ಇಂದು ಇರಾನ್ ಮೇಲೆ ತೀವ್ರ ದಾಳಿ ಮಾಡ್ತೇವೆ: ಅಮೆರಿಕಾದಿಂದ ಇರಾನ್ ಗೆ ನೇರ ವಾರ್ನಿಂಗ್‌

ಅಮೆರಿಕಾದ ರಕ್ಷಣಾ ಸಚಿವ ಪೀಟೆ ಹೆಗ್ಸೆತ್ ಇಂದು ಇರಾನ್ ಗೆ ನೇರವಾಗಿ ವಾರ್ನಿಂಗ್ ನೀಡಿದ್ದಾರೆ. ಇರಾನ್ ಮೇಲೆ ಇಂದು ತೀವ್ರವಾಗಿ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಶತ್ರು ರಾಷ್ಟ್ರವನ್ನು ಹೊಸಕಿ ಹಾಕುತ್ತೇವೆ ಎಂದಿದ್ದಾರೆ. ಕಳೆದ 24 ಗಂಟೆಯಲ್ಲಿ ಇರಾನ್ ಹೆಚ್ಚಿನ ಮಿಸೈಲ್ ಫೈರ್ ಮಾಡಿಲ್ಲ ಎಂದಿದ್ದಾರೆ. ಇಂದು ಮತ್ತೆ ಇರಾನ್ ಗೆ ಅಮೆರಿಕಾ ವಾರ್ನಿಂಗ್ ನೀಡಿದೆ. ಇಂದು ಇರಾನ್ ಮೇಲೆ ತೀವ್ರವಾಗಿ ದಾಳಿ ನಡೆಸುತ್ತೇವೆ ಎಂದು ಅಮೆರಿಕಾ ಹೇಳಿದೆ. ಇರಾನ್ ದೇಶದೊಳಗೆ ಇಂದು ತೀವ್ರವಾದ ಸ್ಟ್ರೈಕ್ ನಡೆಸುತ್ತೇವೆ ಎಂದು ಅಮೆರಿಕಾದ ರಕ್ಷಣಾ ಸಚಿವ ಪೀಟೆ ಹೆಗ್ಸೆತ್‌ ನೇರವಾಗಿ ವಾರ್ನಿಂಗ್ ನೀಡಿದ್ದಾರೆ. ಹೆಚ್ಚಿನ ಫೈಟರ್ ಜೆಟ್, ಹೆಚ್ಚಿನ ಬಾಂಬ್ ನಿಂದ ಹೆಚ್ಚಿನ ಸ್ಟ್ರೈಕ್ ನಡೆಸುತ್ತೇವೆ ಎಂದು ಅಮೆರಿಕಾ ಹೇಳಿದೆ. 

ಅಮೆರಿಕಾದ ಇಂಟಲಿಜೆನ್ಸ್ ಹಿಂದೆಂದಿಗಿಂತಲೂ ಈಗ ಉತ್ತಮವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಇರಾನ್ ಕೆಲವೇ ಕೆಲವು ಮಿಸೈಲ್ ಫೈರ್ ಮಾಡಿದೆ. ಅಮೆರಿಕಾ ಮಿಲಿಟರಿಯು ಇರಾನ್ ಸೇನೆಯನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇರಾನ್ ವಿರುದ್ಧ ಅಮೆರಿಕಾ ನಿರ್ಣಾಯಕ ಗೆಲುವು ಸಾಧಿಸುವ ಹಂತದಲ್ಲಿದೆ. ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಅವರ ಉದ್ದೇಶ ಈಡೇರಿಸುವ ಹಾದಿಯಲ್ಲಿದ್ದೇವೆ ಎಂದು ಪೀಟೆ ಹೆಗ್ಸೆತ್‌ ಹೇಳಿದ್ದಾರೆ. ತಾಂತ್ರಿಕ ಕೌಶಲ್ಯ, ಮಿಲಿಟರಿ ಶಕ್ತಿಯಿಂದ ಶತ್ರುವನ್ನು ಹೊಸಕಿ ಹಾಕಿದ್ದೇವೆ. ಶತ್ರುವನ್ನು ಸಂಪೂರ್ಣವಾಗಿ ಸೋಲಿಸುವವರೆಗೂ ನಾವು ವಿರಮಿಸಲ್ಲ. ಇರಾನ್ , ಈಗ ಹತಾಶವಾಗಿ ಶಾಲೆ, ಆಸ್ಪತ್ರೆಗಳಿಂದ ಮಿಸೈಲ್ ಫೈರ್ ಮಾಡುತ್ತಿದೆ. ನಾಗರಿಕರ ಜೀವವನ್ನು ಬಲಿ ಕೊಡುತ್ತಿದೆ ಎಂದು ಅಮೆರಿಕಾದ ರಕ್ಷಣಾ ಸಚಿವ ಪೀಟೆ ಹೆಗ್ಸೆತ್‌ ಹೇಳಿದ್ದಾರೆ.

Source : News First

1 hour ago

Home Flash News