ಅಂತಿಮ ಕ್ಷಣದಲ್ಲಿ ʼಧುರಂಧರ್ -2ʼ ಕನ್ನಡ,ತೆಲುಗು,ತಮಿಳು ಪೇಯ್ಡ್ ಶೋ ಕ್ಯಾನ್ಸಲ್; ಕಾರಣವೇನು?
ಮುಂಬಯಿ: ರಣ್ವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ (Dhurandhar: The Revenge) ರಿಲೀಸ್‌ಗೆ ಕ್ಷಣಗಣನೆ ಬಾಕಿ ಉಳಿದಿದೆ. ಗುರುವಾರ (ಮಾ.19) ವಿಶ್ವದೆಲ್ಲೆಡೆ ʼಧುರಂಧರ್ -2ʼ ರಿಲೀಸ್ ಆಗಲಿದೆ.
ಬುಧವಾರ (ಮಾ.17) ಸಂಜೆಯಿಂದ ʼಧುರಂಧರ್-2ʼ ಪೇಯ್ಡ್ ಪ್ರಿಮಿಯರ್ ಶೋ ಆರಂಭಗೊಳ್ಳಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್‌ನಿಂದಲೇ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಆ ಮೂಲ ಚಿತ್ರ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
ಪೇಯ್ಡ್ ಪ್ರಿಮಿಯರ್‌ಗಾಗಿ ಲಕ್ಷಾಂತರ ಟಿಕೆಟ್ ಮುಂಗಡವಾಗಿ ಸೇಲ್ ಆಗಿದೆ. ಈ ಸಲ ʼಧುರಂಧರ್ʼ ಪ್ಯಾನ್ ಇಂಡಿಯಾ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಹಾಗಾಗಿ ಪ್ರಾದೇಶಿಕ ಭಾಷೆಯಲ್ಲೂ ʼಧುರಂಧರ್ -2ʼಗೆ ಬೇಡಿಕೆ ಹೆಚ್ಚಿದೆ.
ಇಂದು ಸಂಜೆಯಿಂದ ʼಧುರಂಧರ್ -2ʼ ಪೇಯ್ಡ್ ಪ್ರಿಮಿಯರ್ ಆರಂಭಗೊಳ್ಳಲಿದೆ. ಆದರೆ ಅಂತಿಮ ಹಂತದಲ್ಲಿ ಕೆಲ ಶೋಗಳು ಕ್ಯಾನ್ಸಲ್ ಆಗಿದೆ ಎಂದು ವರದಿಯಾಗಿದೆ.ಸೆನ್ಸಾರ್ ಬೋರ್ಡ್ ʼಧುರಂಧರ್ -2ʼ ಚಿತ್ರದ ಕೆಲ ಹಿಂಸೆಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚನೆ ನೀಡಿದೆ. ಹೀಗಾಗಿ ಚಿತ್ರತಂಡ ದೃಶ್ಯಗಳಿಗೆ ಕತ್ತರಿ ಹಾಕಬೇಕಿದೆ. ಒಟ್ಟು 21 ದೃಶ್ಯಗಳಿಗೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಹೇಳಿದೆ.
ಚಿತ್ರತಂಡ ಹಿಂದಿ ವರ್ಷನ್‌ನಲ್ಲಿನ ದೃಶ್ಯಗಳಿಗೆ ಮೊದಲು ಕತ್ತರಿ ಹಾಕಿ ಅದನ್ನು ಯುಎಫ್ಓಗೆ ಅಪ್ಲೋಡ್ ಮಾಡಲಿದೆ. ಹೀಗಾಗಿ ಇತರೆ ಭಾಷೆಗಳ ಪ್ರಿಮಿಯರ್ ಶೋಗಳು ಪ್ರದರ್ಶನವಾಗುವುದು ಅನುಮಾನವೆನ್ನಲಾಗಿದೆ.