... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಅತ್ತ ಬಂಡಾಯ ಅಭ್ಯರ್ಥಿ ಮನವೊಲಿಸಲು ‘ಕೈ’​​

Davanagere By Election: ಅತ್ತ ಬಂಡಾಯ ಅಭ್ಯರ್ಥಿ ಮನವೊಲಿಸಲು ‘ಕೈ’​​ ನಾಯಕರ ಸರ್ಕಸ್​: ಇತ್ತ ಶಾಕಿಂಗ್​ ಹೇಳಿಕೆ ಕೊಟ್ಟ ಅಭ್ಯರ್ಥಿ ಸಾಧಿಕ್​ ಪೈಲ್ವಾನ್​!

ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ (By Election) ಹಿನ್ನಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ (Davanagere South) ಉಪಚುನಾವಣೆಯಿಂದಾಗಿ ರಾಜಕೀಯ ಬಿಸಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ್​ ಪುತ್ರ ಸಮರ್ಥ್​ ಶಾಮನೂರುಗೆ (Samarth Shamanuru) ಟಿಕೆಟ್​ ನೀಡಲಾಗಿದೆ. ಈ ಹಿನ್ನಲೆ ಕಾಂಗ್ರೆಸ್​​​ ಪಕ್ಷದಲ್ಲಿ ಬಂಡಾಯದ ಗಾಳಿ ಎದ್ದಿದ್ದು, ಸಾಧಿಕ್​ ಪೈಲ್ವಾನ್​ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಈ ನಾಮಪತ್ರ ವಾಪಾಸ್​ ಪಡೆಯಲು ಕಾಂಗ್ರೆಸ್​​ ನಾಯಕರು ಅವರ ಮನವೊಲಿಸಲು ಮುಂದಾಗಿದ್ದಾರೆ.
ನಾಮಪತ್ರ ವಾಪಸ್​​ಗೆ ಡೆಡ್​ಲೈನ್​! ದಾವಣಗೆರೆ ದಕ್ಷಿಣ ಟಿಕೆಟ್​ ವಿಚಾರವಾಗಿದೆ ಕ್ಷೇತ್ರದಲ್ಲಿ ಎದ್ದಿರೋ ಬಂಡಾಯದ ಬಿಸಿ ಕಾಂಗ್ರೆಸ್​​ಗೆ (Congress) ಬಿಸಿ ತುಪ್ಪವಾಗಿದೆ. ಅಲ್ಪಸಂಖ್ಯಾತ ಮುಖಂಡರ ಮನವೊಲಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೈ ನಾಯಕರಿಗೆ ಸೂಚನೆ ನೀಡಿದ್ದಾರೆ. ನಾಮಪತ್ರ ವಾಪಸ್​ ಪಡೆಯಲು ಸಂಜೆ ಡೆಡ್​​ಲೈನ್​ ಇದ್ದು, ಎಲ್ಲರ ಚಿತ್ತ ದಾವಣಗೆರೆ ಕ್ಷೇತ್ರದತ್ತ ನೆಟ್ಟಿದೆ. ರಂಗೇರಿದ ಉಪಸಮರ ಅಖಾಡ ದಾವಣಗೆರೆಯಲ್ಲಿ ಉಪಸಮರ ಅಖಾಡ ರಂಗೇರಿದ್ದು, ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಟಕ್ಕರ್ ಕೊಡ್ತಾರಾ ಎನ್ನುವ ಚರ್ಚೆ ಜೋರಾಗಿದೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು, ಸಾದಿಕ್ ಪೈಲ್ವಾನ್‌‌ಗೆ ಇತರ ಪಕ್ಷೇತರ ಅಭ್ಯರ್ಥಿಗಳು ಬೆಂಬಲ ನೀಡುವ ಬಗ್ಗೆ ಕೂಡ ಮಾತುಕತೆ ನಡೆಯುತ್ತಿದೆ. ಮುಸ್ಲಿಂ ಮುಖಂಡರ ಅಸಮಾಧಾನ ಕಾಂಗ್ರೆಸ್​ ಹಾಗೂ ಶಾಮನೂರು ಫ್ಯಾಮಿಲಿಗೆ ದೊಡ್ಡ ಸಂಕಷ್ಟ ತಂದಿದೆ.

Source : News18 Kannada

2 hours ago

Home Flash News